ADVERTISEMENT

7 ಲಸಿಕೆ ಸೋರಿಕೆ: ವೈದ್ಯ ಕಾಂಗ್ರೆಸ್ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 14:13 IST
Last Updated 4 ಜೂನ್ 2021, 14:13 IST

ಮಂಗಳೂ​ರು: ‘ನಾಲ್ಕು ತಿಂಗಳಲ್ಲಿ ಉತ್ಪಾದನೆ ಆಗಿರುವ 34 ಕೋಟಿ ಲಸಿಕೆಯಲ್ಲಿ ಅಂದಾಜು 7 ಕೋಟಿ ಲಸಿಕೆ ನಾಪತ್ತೆಯಾಗಿದ್ದು ಎಲ್ಲಿ ಹೋಗಿದೆ ಎಂಬುದುನ್ನು ಕೇಂದ್ರ ಸರ್ಕಾರ ದೇಶದ ಜನರಿಗೆ ತಿಳಿಸಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ವೈದ್ಯರ ಘಟಕದ ಅಧ್ಯಕ್ಷ ಡಾ.ಶೇಖರ್ ಪೂಜಾರಿ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಒಟ್ಟು ಉತ್ಪಾದನೆಯಾದ 34 ಕೋಟಿ ಲಸಿಕೆಯಲ್ಲಿ ಇದುವರೆಗೆ 21 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. 6 ಕೋಟಿ ಲಸಿಕೆ ವಿದೇಶಗಳಿಗೆ ನೀಡಲಾಗಿದೆ. ಇನ್ನುಳಿದ ಲಸಿಕೆ ಎಲ್ಲಿ ಹೋಗಿದೆ ಎಂಬ ಮಾಹಿತಿ ಇಲ್ಲ ಎಂದು ಹೇಳಿದರು. ಕಾಂಗ್ರೆಸ್‌ ಪಕ್ಷದ ಪ್ರಮುಖರಾದ ಶುಭೋದಯ ಆಳ್ವ , ಪ್ರಕಾಶ್ ಸಾಲ್ಯಾನ್, ಗಣೇಶ ಪೂಜಾರಿ, ನಿತ್ಯಾನಂದ ಸೆಟ್ಟಿ, ಯೋಗೀಶ್ ಕುಮಾರ್, ಆರಿಫ್ ಬಾವಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT