ಅಮಾನತು
ಮೂಡುಬಿದಿರೆ: ದೂರು ನೀಡಲು ಬಂದ ಮಹಿಳೆಯ ಮೊಬೈಲ್‌ಗೆ ಪದೇ ಪದೇ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ ಆರೋಪದ ಮೇಲೆ ಮೂಡುಬಿದಿರೆ ಠಾಣೆಯ ಕಾನ್‌ಸ್ಟೆಬಲ್‌ನನ್ನು ಅದೇ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕಾನ್‌ಸ್ಟೇಬಲ್ ಶಾಂತಪ್ಪ (28) ಬಂಧಿತ ಆರೋಪಿ. ಆತನಿಗೆ ನ್ಯಾಯಾಲಯವು ಜಾಮೀನು ನೀಡಿದೆ. ಬಂಧನವಾದ ಬೆನ್ನಲ್ಲೇ, ಕಾನ್‌ಸ್ಟೆಬಲ್ ಶಾಂತಪ್ಪನನ್ನು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಅಮಾನತುಗೊಳಿಸಿದ್ದಾರೆ.
ಸಾಂಸಾರಿಕ ಕಲಹದ ಬಗ್ಗೆ ಮಹಿಳೆಯೊಬ್ಬರು ಪತಿ ವಿರುದ್ಧ ದೂರು ನೀಡಲು ಆ.25 ರಂದು ಮೂಡುಬಿದಿರೆ ಠಾಣೆಗೆ ಬಂದಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಶಾಂತಪ್ಪ, ಠಾಣೆಗೆ ಭೇಟಿ ನೀಡಿದವರ ವಿವರ ದಾಖಲಿಸುವ ಪುಸ್ತಕದಲ್ಲಿ ದೂರುದಾರ ಮಹಿಳೆಯ ವಿವರಗಳ ಜೊತೆಗೆ, ಆಕೆಯ ಮೊಬೈಲ್ ನಂಬರನ್ನು ಕೂಡ ಬರೆದಿಟ್ಟಿದ್ದ. ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಅವರು ದಂಪತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಕಳುಹಿಸಿದ್ದರು.
ಇದಾದ ಬಳಿಕ ಶಾಂತಪ್ಪ ಮೂರು ಸಲ ಮಹಿಳೆಗೆ ಮೊಬೈಲ್ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದ ಎಂದು ಆರೋಪಿಸಲಾಗಿದೆ. ಆತ ಕರೆ ಮಾಡಿದ್ದಾಗ ಮಾತನಾಡಿದ್ದ ಧ್ವನಿಯನ್ನು ರೆಕಾರ್ಡ್ ಮಾಡಿದ್ದ ಮಹಿಳೆ ಈ ಬಗ್ಗೆ ಮಹಿಳೆ, ಕಾನ್‌ಸ್ಟೆಬಲ್ ವಿರುದ್ಧ ಪುರಾವೆ ಸಹಿತ ಸೋಮವಾರ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಶಾಂತಪ್ಪ 2022ರಲ್ಲಿ ಪೊಲೀಸ್ ಕಾನ್ಸ್‌ಸ್ಟೆಬಲ್ ಆಗಿ ಇಲಾಖೆಗೆ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.