ADVERTISEMENT

Dharmasthala Case: ಇಂದು ನ್ಯಾಯಾಲಯಕ್ಕೆ ಹಾಜರಾಗಲಿರುವ ಸಾಕ್ಷಿ ದೂರುದಾರ

ಧರ್ಮಸ್ಥಳ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 23:48 IST
Last Updated 24 ಸೆಪ್ಟೆಂಬರ್ 2025, 23:48 IST
<div class="paragraphs"><p>ಸಾಕ್ಷಿ ದೂರುದಾರ</p></div>

ಸಾಕ್ಷಿ ದೂರುದಾರ

   

ಮಂಗಳೂರು: ಧರ್ಮಸ್ಥಳದ ಬೆಳವಣಿಗೆಗೆ ಸಂಬಂಧಿಸಿ ನ್ಯಾಯಾಧೀಶರ ಎದುರು ಸಾಕ್ಷಿ ದೂರುದಾರನ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಗುರುವಾರ ಮುಂದುವರಿಯಲಿದೆ.

‘ಹೇಳಿಕೆ ದಾಖಲು ಪ್ರಕ್ರಿಯೆ ಮಂಗಳವಾರ ಪೂರ್ಣಗೊಂಡಿಲ್ಲ. ಆತನನ್ನು ಗುರುವಾರ ಬೆಳ್ತಂಗಡಿಯ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಲಾಗುವುದು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. 

ADVERTISEMENT

ಈ ಪ್ರಕರಣದಲ್ಲಿ ಇತರರು ನೀಡಿರುವ ಹೇಳಿಕೆಯನ್ನು ದಾಖಲೀಕರಣ ಪ್ರಕ್ರಿಯೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ಬುಧವಾರವೂ ಮುಂದುವರಿಯಿತು.

ಜಾಮೀನು ಅರ್ಜಿ ವಿಚಾರಣೆ 27ರಂದು:

ಮನೆಯಲ್ಲಿ ಶಸ್ತ್ರಾಸ್ತ್ರ ಪತ್ತೆಯಾದ ಪ್ರಕರಣದಲ್ಲಿ ಜಾಮೀನು ಕೋರಿ ಮಹೇಶ್‌ ಶೆಟ್ಟಿ ತಿಮರೋಡಿ ಪರ ವಕೀಲರು ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತ ವಿಚಾರಣೆ ಇದೇ 27ರಂದು ನಿಗದಿಯಾಗಿದೆ.   

ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್‌ ಆದೇಶ ಮಾಡಿದ್ದಾರೆ. ಆದೇಶದ ಪ್ರತಿಯನ್ನು ಇನ್ನೂ ತಿಮರೋಡಿ ಅವರಿಗೆ ತಲುಪಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ.

‘ತಿಮರೋಡಿ ಅವರು ಮನೆಯಲ್ಲೂ ಇಲ್ಲ, ಕಚೇರಿಯಲ್ಲೂ ಇಲ್ಲ. ಹಾಗಾಗಿ ಗಡಿಪಾರು ಆದೇಶ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಅವರಿಗಾಗಿ ಹುಡುಕಾಟ ನಡೆಸಿದ್ದೇವೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.