
ದನ
(ಸಾಂಕೇತಿಕ ಚಿತ್ರ)
ಮಂಗಳೂರು: ಎಡಪದವು ಪೂಪಾಡಿಕಲ್ಲು ಎಂಬಲ್ಲಿ ರಸ್ತೆ ಬದಿಯಲ್ಲಿ ಚರ್ಮುರಿ ಮಾರುತ್ತಿದ್ದ ಕಡೆಗೆ ಬಂದು, ಅಲ್ಲಿದ್ದ ಸಾಮಗ್ರಿಯನ್ನು ತಿಂದ ದನಕ್ಕೆ ಈರುಳ್ಳಿ ಕೊಚ್ಚಲು ಬಳಸುವ ಚಾಕುವಿನಿಂದ ಭಾನುವಾರ ಹಲ್ಲೆ ನಡೆಸಲಾಗಿದೆ.
‘ಮುಸ್ಲಿಂ ಚರ್ಮುರಿ ವ್ಯಾಪಾರಿಯೊಬ್ಬರು ಹಿಂದೂ ಮಾಲಾಧಾರಿಗಳಿಗೆ ರಸ್ತೆ ಬದಿ ಚರ್ಮುರಿ ಮಾರಾಟ ಮಾಡುತ್ತಿದ್ದರು. ಈ ವೇಳೆ ದನವೊಂದು ಆ ಸ್ಥಳದತ್ತ ನುಗ್ಗಿ ಅಲ್ಲಿದ್ದ ಸಾಮಗ್ರಿ ತಿನ್ನಲಾರಂಭಿಸಿತ್ತು. ಅದನ್ನು ಓಡಿಸಿಕೊಂಡು ಹೋಗಿದ್ದ ವ್ಯಾಪಾರಿ ಈರುಳ್ಳಿ ಕೊಚ್ಚಲು ಇಟ್ಟುಕೊಂಡಿದ್ದ ಚಾಕುವಿನಿಂದ ದನದ ಮೇಲೆ ಹಲ್ಲೆ ಮಾಡಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ’ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
‘ಮುಸ್ಲಿಂ ಚರ್ಮುರಿ ಅಂಗಡಿಯಲ್ಲಿ ಹಿಂದೂ ಮಾಲಾಧಾರಿಗಳು ಚರ್ಮುರಿ ತಿನ್ನುವುದು ಸಕಾರಾತ್ಮಕ ಸಂಕೇತ. ದನದ ಮೇಲೆ ಅಚಾನಕ್ ಆಗಿ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಯಾರೂ ದೂರು ನೀಡಿಲ್ಲ. ಸಾಕುದನದ ಬಗ್ಗೆ ಕಾಳಜಿ ವಹಿಸುವುದು ಅದರ ಮಾಲೀಕರ ಜವಾಬ್ದಾರಿ. ದನವನ್ನು ಗಾಯಗೊಳಿಸಿ ಹಿಂಸಿಸಿದ್ದಕ್ಕೆ ದಂಡ ವಿಧಿಸಲು ಅವಕಾಶ ಇದೆ’ ಎಂದು ಕಮಿಷನರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.