ADVERTISEMENT

ಸರಣಿ ಕಳವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 2:54 IST
Last Updated 11 ಜನವರಿ 2021, 2:54 IST

ಸುರತ್ಕಲ್‌: ಇಲ್ಲಿನ ಕುಳಾಯಿ ಗ್ರಾಮದ ನಂದನಜಲು ರವಿ ಶೆಟ್ಟಿ ಅವರ ಮನೆಯ ದೈವಸ್ಥಾನ, ಇಡ್ಯಾ ಗ್ರಾಮದ ಗುಡ್ಡೆಕೊಪ್ಪಳ ರಾಮಾಂಜನೇಯ ಭಜನಾ ಮಂದಿರ, ಜಾರು ಮನೆ ದೈವಸ್ಥಾನ ಮತ್ತು ಚಿತ್ತಾಪುರ ಗ್ರಾಮದ ಸತೀಶ್‌ ಸುವರ್ಣ ಅವರ ಕುಟುಂಬದ ದೈವಸ್ಥಾನಗಳಲ್ಲಿ ಕಳವು ಮಾಡಿದ ಆರೋಪದ ಮೇಲೆ ಧಾರವಾಡದ ಟೋಲ್ ನಾಕಾದ ರಾಜೇಶ್ ನಾಯ್ಕ್‌ ಎಂಬಾತನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಉಡುಪಿ ಮಂಚಿಯ ದುರ್ಗಾ ನಗರದ ಇಂದ್ರಾಳಿಯಲ್ಲಿ ಹಾಲಿ ವಾಸ್ತವ್ಯವಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಆರೋಪಿಯಿಂದ 47 ಗ್ರಾಂ ಚಿನ್ನಾಭರಣ, 16ಕೆಜಿ ಬೆಳ್ಳಿಯ ವಸ್ತುಗಳು ಸೇರಿದಂತೆ ₹13.53 ಲಕ್ಷದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ.

ADVERTISEMENT

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸುರತ್ಕಲ್ ಇನ್‌ಸ್ಪೆಕ್ಟರ್ ಚಂದ್ರಪ್ಪ ಕೆ. ನೇತೃತ್ವದಲ್ಲಿ ಪಿಎಸ್‌ಐ ಚಂದ್ರಶೇಖರಯ್ಯ, ಸಿಬ್ಬಂದಿ ಅಣ್ಣಪ್ಪ ವಂಡ್ಸೆ, ಪೀಟರ್‌ ಡಿಸೋಜ, ಕೆ. ಮಂಜುನಾಥ, ಯರಬಾಳು ಬಸವರಾಜು, ಮನು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.