ADVERTISEMENT

ಉಪ್ಪಿನಂಗಡಿ: ನೇತ್ರಾವತಿ ನದಿ ದಡದಲ್ಲಿ ಮೊಸಳೆ ಪತ್ತೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 15:37 IST
Last Updated 3 ಸೆಪ್ಟೆಂಬರ್ 2024, 15:37 IST
<div class="paragraphs"><p>ಉಪ್ಪಿನಂಗಡಿಯ ನೇತ್ರಾವತಿ ನದಿ ದಡದಲ್ಲಿ ಮೊಸಳೆಯೊಂದು ಕಂಡು ಬಂದಿದೆ</p></div>

ಉಪ್ಪಿನಂಗಡಿಯ ನೇತ್ರಾವತಿ ನದಿ ದಡದಲ್ಲಿ ಮೊಸಳೆಯೊಂದು ಕಂಡು ಬಂದಿದೆ

   

ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿಯ ನೇತ್ರಾವತಿ ನದಿ ಸೇತುವೆ ಬದಿಯಲ್ಲಿ ಮಂಗಳವಾರ ಸಂಜೆ ದೊಡ್ಡ ಗಾತ್ರದ ಮೊಸಳೆಯೊಂದು ಕಂಡು ಬಂದಿದೆ.

ನೇತ್ರಾವತಿ ಸೇತುವೆಯ ಇನ್ನೊಂದು ದಡ, ಇಳಂತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ನದಿಯ ಬದಿಯ ಮರಳ ದಿಬ್ಬದಲ್ಲಿ ಮೊಸಳೆ ವಿರಮಿಸುತ್ತಿರುವುದನ್ನು ಇಳಂತಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಸಾಮಾಜಿಕ ಕಾರ್ಯಕರ್ತ ಫಯಾಜ್ ಯು.ಟಿ.ಗಮನಿಸಿದ್ದು, ಅದರ ಫೋಟೊ ಕ್ಲಿಕ್ಕಿಸಿದ್ದಾರೆ.

ADVERTISEMENT

ಮೊಸಳೆ ಕಂಡು ಬಂದ ಸುಮಾರು 500 ಮೀ. ದೂರದಲ್ಲಿ ನೇತ್ರಾವತಿ-ಕುಮಾರಧಾರ ನದಿಗಳು ಸಂಗಮವಾಗುತ್ತಿದ್ದು, ಅಲ್ಲೇ ಇರುವ ಸಹಸ್ರಲಿಂಗೇಶ್ವರ ದೇವಾಲಯದ ಬಳಿಯ ಸ್ನಾನಘಟ್ಟದಲ್ಲಿ ಪಿಂಡ ಪ್ರದಾನ ಕಾರ್ಯ, ತೀರ್ಥ ಸ್ನಾನಗಳು ನಿರಂತರವಾಗಿ ನಡೆಯುತ್ತಿವೆ. ಈ ಭಾಗದಲ್ಲಿ ನದಿಗೆ ಇಳಿದು ಮೀನು ಹಿಡಿಯಲು ಬಲೆ, ಗಾಳ ಹಾಕುವುದು ಸಾಮಾನ್ಯವಾಗಿದ್ದು, ಮೊಸಳೆ ಕಂಡು ಬಂದಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.

2022ರ ಸೆಪ್ಟೆಂಬರ್‌ನಲ್ಲಿ ಪಂಜಳದ ಪೆಟ್ರೋಲ್ ಪಂಪ್ ಸಮೀಪ ನೇತ್ರಾವತಿ ನದಿಯಲ್ಲಿ ಮೂರು ಮೊಸಳೆಗಳು ಕಂಡು ಬಂದಿದ್ದವು. ಈ ಪೈಕಿ ಒಂದು ದೊಡ್ಡ ಗಾತ್ರದ್ದಾದರೆ, ಇನ್ನೆರಡು ಸಣ್ಣದಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.