ADVERTISEMENT

ಮಂಗಳೂರು | 40 ಕೈದಿಗಳು ಮಾದಕ ‍ಪದಾರ್ಥ ಸೇವಿಸಿದ್ದು ದೃಢ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 5:06 IST
Last Updated 31 ಜುಲೈ 2024, 5:06 IST

ಮಂಗಳೂರು: ನಗರದ ಪೊಲೀಸ್ ಅಧಿಕಾರಿಗಳು ಈಚೆಗೆ ಜಿಲ್ಲಾ ಕಾರಾಗೃಹಕ್ಕೆ ದಾಳಿ ನಡೆಸಿದ ವೇಳೆ ವೈದ್ಯಕೀಯ ತಪಾಸಣೆಗೆ ಒಳಗಾದ 40 ಕೈದಿಗಳು ಮಾದಕ ಪದಾರ್ಥ ಸೇವಿಸಿದ್ದುದು ದೃಢಪಟ್ಟಿದೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ನಗರ ಪೊಲೀಸ್‌ ಕಮಿಷನರ್‌ ಅನುಪಮ್ ಅಗರ್ವಾಲ್‌, ‘ಜೈಲಿನಲ್ಲಿ 300ಕ್ಕೂ ಹೆಚ್ಚು ಕೈದಿಗಳಿದ್ದು, ಅವರಲ್ಲಿ ಸಂಶಯ ಬಂದ 110 ಮಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದೆವು. ಅವರಲ್ಲಿ 40 ಮಂದಿ ಮಾದಕ ಪದಾರ್ಥ ಸೇವಿಸಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ’ ಎಂದು ತಿಳಿಸಿದರು.

‘ಜೈಲಿನೊಳಗೆ ಕೈದಿಗಳು ಮೊಬೈಲ್‌ ಬಳಸುವುದಕ್ಕೆ ಅವಕಾಶ ಇಲ್ಲ. ಆದರೂ, 25 ಮೊಬೈಲ್‌ಗಳು ಜೈಲಿನೊಳಗೆ ಪತ್ತೆಯಾಗಿವೆ. ಬಿಗು ಭದ್ರತೆ ಇದ್ದರೂ ಮಾದಕ ಪದಾರ್ಥ ಹಾಗೂ ಮೊಬೈಲ್ ಹೇಗೆ ರವಾನೆಯಾಗುತ್ತಿದೆ ಎಂಬ ಕುರಿತ ತನಿಖೆ ಪ್ರಗತಿಯಲ್ಲಿದೆ’ ಎಂದರು.: ನಗರದ ಪೊಲೀಸ್ ಅಧಿಕಾರಿಗಳು ಈಚೆಗೆ ಜಿಲ್ಲಾ ಕಾರಾಗೃಹಕ್ಕೆ ದಾಳಿ ನಡೆಸಿದ ವೇಳೆ ವೈದ್ಯಕೀಯ ತಪಾಸಣೆಗೆ ಒಳಗಾದ 40 ಕೈದಿಗಳು ಮಾದಕ ಪದಾರ್ಥ ಸೇವಿಸಿದ್ದುದು ದೃಢಪಟ್ಟಿದೆ.

‘ಜೈಲಿನೊಳಗೆ ಕೈದಿಗಳು ಮೊಬೈಲ್‌ ಬಳಸುವುದಕ್ಕೆ ಅವಕಾಶ ಇಲ್ಲ. ಆದರೂ, 25 ಮೊಬೈಲ್‌ಗಳು ಜೈಲಿನೊಳಗೆ ಪತ್ತೆಯಾಗಿವೆ. ಬಿಗು ಭದ್ರತೆ ಇದ್ದರೂ ಮಾದಕ ಪದಾರ್ಥ ಹಾಗೂ ಮೊಬೈಲ್ ಹೇಗೆ ರವಾನೆಯಾಗುತ್ತಿದೆ ಎಂಬ ಕುರಿತ ತನಿಖೆ ಪ್ರಗತಿಯಲ್ಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.