ಸಾಂದರ್ಭಿಕ ಚಿತ್ರ
ಕಾಸರಗೋಡು: ಮಂಜೇಶ್ವರದ ಬೇಳೂರು ನದಿಯಲ್ಲಿ ವಿಟ್ಲ ಕೆ.ಕೆ.ಕಣ್ಣಾಜೆ ನಿವಾಸಿ ರಾಮಚಂದ್ರ ಭಟ್ (61) ಎಂಬುವರ ಶವ ಪತ್ತೆಯಾಗಿದೆ. ಜುಲೈ 29ರಿಂದ ಅವರು ಕಾಣೆಯಾಗಿದ್ದರು. ಮಂಜೇಶ್ವರ ಪೊಲೀಸರು ಪರಿಶೀಲನೆ ನಡೆಸಿದರು.
ನಾಪತ್ತೆ
ಕಾಸರಗೋಡು: ಬಂದ್ಯೋಡಿನ ಕರಿಂಬಿಲ ತೋಡಿಗೆ ಬಿದ್ದಿದ್ದ ಸ್ಥಳೀಯ ಬಾಜತ್ತಡ್ಕ ನಿವಾಸಿ ಸೀತಾರಾಮ (52) ಕಾಣೆಯಾಗಿದ್ದಾರೆ. ಹುಲ್ಲು ಕತ್ತರಿಸಲು ಹೋಗಿದ್ದವರು ಕಾಲುಜಾರಿ ಬಿದ್ದಿದ್ದರು. ಅವರ ಚೀಲ ಮತ್ತು ಕತ್ತಿ ತೋಡಿನ ಬಳಿ ಪತ್ತೆಯಾಗಿದೆ. ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಎಟಿಎಂಗೆ ಹಾನಿ
ಕಾಸರಗೋಡು: ಮೊಗ್ರಾಲಿನಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್‌ನ ಎಟಿಎಂನಲ್ಲಿ ಕಳವಿಗೆ ಯತ್ನಿಸಿದ ಕಳ್ಳರು ಹಾನಿ ಮಾಡಿದ್ದಾರೆ. ಈ ವೇಳೆ ಸೈರನ್ ಮೊಳಗಿದಾಗ ಕಳ್ಳರು ಪರಾರಿಯಾಗಿದ್ದಾರೆ. ನಗರ ಪೊಲೀಸರು ಮತ್ತು ಕುಂಬಳೆ ಪೊಲೀಸರು ತಪಾಸಣೆ ನಡೆಸಿದರು.
ಶಾಲೆಗೆ ಕನ್ನ
ಕಾಸರಗೋಡು: ಪೊಯಿನಾಚಿ ಭಾರತ್ ಶಾಲೆಯ ಬಾಗಿಲ ಬೀಗ ಒಡೆದು ನುಗ್ಗಿದ ಕಳ್ಳರು ಮಕ್ಕಳು ಜನಪರ ಚಟುವಟಿಕೆಗಳಿಗೆ ಬಳಸುತ್ತಿದ್ದ ನಾಣ್ಯಗಳ ಹುಂಡಿಯನ್ನು ಅಪಹರಿಸಿದ್ದಾರೆ. ಸುಮಾರು ₹ 15 ಸಾವಿರ ಕಳವಾಗಿದೆ ಎಂದು ಮೇಲ್ಪರಂಬ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.