ADVERTISEMENT

ಮೂಡುಬಿದಿರೆ: ಡಿಸಿ ಮನ್ನಾ ಜಾಗ ಕಾನೂನು ತಿದ್ದುಪಡಿಗೆ ಆಗ್ರಹ 

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 7:25 IST
Last Updated 15 ಫೆಬ್ರುವರಿ 2024, 7:25 IST

ಮೂಡುಬಿದಿರೆ: ಡಿಸಿ ಮನ್ನಾ ಜಾಗವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹಂಚಲು ಸರ್ಕಾರ ಸೂಕ್ತ ಕಾನೂನು ತಿದ್ದುಪಡಿ ಮಾಡಬೇಕೆಂದು ಮೂಡುಬಿದಿರೆ ತಾಲ್ಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ನಾಗರಿಕ ಹಕ್ಕು ಜಾಗೃತಿ ಸಮಿತಿ ಆಗ್ರಹಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ರಮೆಶ್ ಬೋಧಿ, ‘ಡಿಸಿ ಮನ್ನಾ ಜಾಗವನ್ನು ಪರಿಶಿಷ್ಟ ಜಾತಿ, ಪಂಗಡವದರಿಗೆ ಹಂಚಲು 2014ರಲ್ಲಿ ಆಗಿನ ಜಿಲ್ಲಾಧಿಕಾರಿ ಅದೇಶ ಮಾಡಿದ್ದರು. ಕರ್ನಾಟಕ ಭೂ ಮಂಜುರಾತಿ ಕಾಯ್ದೆ 1969ಕ್ಕೆ ಸೂಕ್ತ ತಿದ್ದುಪಡಿ ಆಗದ ಕಾರಣ ಆದೇಶ ಅನುಷ್ಠಾನಕ್ಕೆ ತೊಡಕಾಗಿದೆ. ಸದ್ರಿ ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕೆಂದು ಮದ್ರಾಸ್ ಪ್ರಾಂತ್ಯಕ್ಕೊಳಪಡುವ ಭಟ್ಕಳ, ಹೊನ್ನಾವರ, ಕುಮಟಾ, ಕುಂದಾಪುರ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶೃಂಗೇರಿ, ಮಡಿಕೇರಿ, ಕಾಸರಗೋಡು ಶಾಸಕರಿಗೆ ಮನವಿ ಮಾಡಲಾಗಿದೆ. ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಕಂದಾಯ ಸಚಿವರು ಮತ್ತು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ ಡಿ.ಸಿ ಮನ್ನಾ ಜಾಗಕ್ಕೆ ಕಾನೂನು ತಿದ್ದುಪಡಿ ತಂದು ಅರ್ಹ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗುವಂತಾಗಬೇಕೆಂದು ನಾವು ಆಗ್ರಹಿಸುತ್ತೇವೆ ಎಂದರು.

ನಾರಾಯಣ ಕಡಲಕೆರೆ, ಭಾಸ್ಕರ್ ಎನ್.ಎಸ್, ಜ್ಯೋತಿ ನಾಯಕ್, ಭವಾನಿ ನಾಯಕ್, ರಾಮಚಂದ್ರ ಸುಜಜಿಜಗೋಷ್ಠಿಯಲ್ಲಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.