ADVERTISEMENT

ಸುರತ್ಕಲ್ | ‘ಮಾನವ ಸಂಪನ್ಮೂಲ ಮಹತ್ವದ್ದು’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 14:42 IST
Last Updated 3 ಸೆಪ್ಟೆಂಬರ್ 2024, 14:42 IST
ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ.ಹರೀಶ್ ಆಚಾರ್ಯ ಮಾತನಾಡಿದರು
ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ.ಹರೀಶ್ ಆಚಾರ್ಯ ಮಾತನಾಡಿದರು   

ಸುರತ್ಕಲ್: ಸಂಪನ್ಮೂಲಗಳಲ್ಲಿ ಮಾನವ ಸಂಪನ್ಮೂಲ ಅತ್ಯಂತ ಮಹತ್ವದ್ದಾಗಿದೆ ಎಂದು ಗೋವಿಂದ ದಾಸ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಹರೀಶ್ ಆಚಾರ್ಯ ಹೇಳಿದರು.

ಪದವಿ ಪೂರ್ವ ಕಾಲೇಜಿನ ಮಾನವಿಕ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗೋವಿಂದ ದಾಸ ಪದವಿ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಉಪಪ್ರಾಂಶುಪಾಲೆ ಸುನೀತಾ ಕೆ., ಮಾನವಿಕ ಸಂಘದ ಸಂಯೋಜಕಿ ಲೀಲಾವತಿ ಭಾಗವಹಿಸಿದ್ದರು.

ಸ್ನೇಹ ಶ್ರೀವಾಸ್ತವ್ ಸ್ವಾಗತಿಸಿದರು. ಖುಷಿ ಅಂಚನ್ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಅಮರೇಶ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.