ಉಜಿರೆ (ದಕ್ಷಿಣ ಕನ್ನಡ ಜಿಲ್ಲೆ): ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೋಮವಾರ ನಾಡಿನ ವಿವಿಧೆಡೆಯಿಂದ ಬಂದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಹೆಚ್ಚಿನವರು ಸಂಪ್ರದಾಯದಂತೆ ನೇತ್ರಾವತಿ ಸ್ನಾನಘಟ್ಟದಲ್ಲಿ ನದಿ ಸ್ನಾನ ಮಾಡಿ ನಡೆದುಕೊಂಡು ದೇವಸ್ಥಾನಕ್ಕೆ ಬಂದರು.
ಸರ್ಕಾರದ ಮಾರ್ಗಸೂಚಿ, ನಿಯಮಗಳ ಪ್ರಕಾರ ಮಾಸ್ಕ್ ಧಾರಣೆ, ಅಂತರ ಕಾಪಾಡುವುದು ಮೊದಲಾದ ನಿಯಮಗಳನ್ನು ದೇವಸ್ಥಾನದಲ್ಲಿ, ಅನ್ನಪೂರ್ಣ ಭೋಜನಾಲಯದಲ್ಲಿ ಹಾಗೂ ಹೆಗ್ಗಡೆಯವರ ಬೀಡಿನಲ್ಲಿ (ನಿವಾಸ) ಪಾಲಿಸಲಾಗಿದೆ.
ದೇವರ ದರ್ಶನದ ಬಳಿಕ ಭಕ್ತರು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದರು. ಧರ್ಮಸ್ಥಳದಲ್ಲಿ ಸೋಮವಾರ ವಿಶೇಷ ದಿನವಾದುದರಿಂದ ಭಕ್ತರ ಸಂಖ್ಯೆ ಅಧಿಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.