ADVERTISEMENT

ಕಟೀಲು: ಭಕ್ತರ ಸಂಖ್ಯೆ ಹೆಚ್ಚಳ

ದೇವಿಗೆ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 11:58 IST
Last Updated 4 ಸೆಪ್ಟೆಂಬರ್ 2020, 11:58 IST
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿ ದರ್ಶನ ಪಡೆಯಲು ಶುಕ್ರವಾರ ಭಕ್ತರು ಸಾಲಿನಲ್ಲಿ ನಿಂತಿದ್ದರು
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿ ದರ್ಶನ ಪಡೆಯಲು ಶುಕ್ರವಾರ ಭಕ್ತರು ಸಾಲಿನಲ್ಲಿ ನಿಂತಿದ್ದರು   

ಮೂಲ್ಕಿ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎರಡು ದಿನಗಳಿಂದ ಎಲ್ಲ ಸೇವೆಗಳು ನಿಯಮಿತವಾಗಿ ಆರಂಭವಾಗಿವೆ. ದೇವಿಗೆ ವಿಶೇಷ ದಿನವಾದ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು.

ಕೋವಿಡ್–19 ನಿಯಮ ಪಾಲನೆಯೊಂದಿಗೆ, ದುರ್ಗಾ ನಮಸ್ಕಾರ, ಹೂವಿನ ಪೂಜೆ ಸೇರಿದಂತೆ ಎಲ್ಲ ಸೇವೆಗಳೂ ನಡೆಯುತ್ತಿವೆ. ಸಾಂಕ್ರಾಮಿಕ ಕಾಯಿಲೆ ನಿಯಂತ್ರಣದ ಉದ್ದೇಶದಿಂದ ವೃದ್ಧರು, 10 ವರ್ಷದೊಳಗಿನ ಮಕ್ಕಳಿಗೆ ದೇವಳ ಪ್ರವೇಶ ನಿಷೇಧ ನಿಯಮ ಮುಂದುವರಿಯಲಿದೆ.

‘ದಿನಕ್ಕೆ ಐದು ರಂಗಪೂಜೆ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ. ಹಣ್ಣು–ಕಾಯಿ ಸೇವೆ ಸದ್ಯಕ್ಕೆ ಪ್ರಾರಂಭಗೊಂಡಿಲ್ಲ. ಭಕ್ತರು ಬಾಟಲಿ ತಂದಲ್ಲಿ ತೀರ್ಥ ನೀಡಲಾಗುತ್ತದೆ. ಮಕ್ಕಳ ಅನ್ನಪ್ರಾಶನ ಸೇವೆಗೆ ಅವಕಾಶ ಕಲ್ಪಿಸಲಾಗಿಲ್ಲ. ಅನ್ನಪ್ರಾಶನ ಸೇವೆ ರಸೀದಿ ಮಾಡಿಸಿದವರಿಗೆ ಗುಡಾನ್ನ ಪಾಯಸವನ್ನು ಪ್ರಸಾದವಾಗಿ ನೀಡಲಾಗುತ್ತದೆ. ಅಕ್ಷರಾಭ್ಯಾಸ ಸಂಸ್ಕಾರ ಸೇವೆ ಪ್ರಾರಂಭವಾಗಿಲ್ಲ’ ಎಂದು ದೇವಳದ ಪ್ರಮುಖರು ತಿಳಿಸಿದ್ದಾರೆ.

ADVERTISEMENT

‘ವಾಹನ ಪೂಜೆ ನಡೆಯುತ್ತದೆ. ದೇವಳ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ, ಸರದಿಯಂತೆ, ಏಕಕಾಲದಲ್ಲಿ ಒಂದೇ ಮದುವೆ ನಡೆಸಲು ಅವಕಾಶವಿದೆ. ಚಂಡಿಕಾ ಹೋಮ ಇತ್ಯಾದಿ ಹೋಮಗಳನ್ನು ಮೊದಲೇ ನಿಗದಿಪಡಿಸಬೇಕು’ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.