ADVERTISEMENT

ಮಂಗಳೂರು|ಧನ್ವಂತರಿ ಪ್ರತಿಷ್ಠಾಪನೆ, ಬಹ್ಮಕಲಶೋತ್ಸವ

​ಪ್ರಜಾವಾಣಿ ವಾರ್ತೆ
Published 13 ಮೇ 2025, 12:20 IST
Last Updated 13 ಮೇ 2025, 12:20 IST
ತಲಪಾಡಿಯ ಶಾರದಾ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಧನ್ವಂತರಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಲಾಯಿತು
ತಲಪಾಡಿಯ ಶಾರದಾ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಧನ್ವಂತರಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಲಾಯಿತು   

ಮಂಗಳೂರು: ತಲಪಾಡಿ ಗ್ರಾಮದಲ್ಲಿರುವ ಶಾರದಾ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಧನ್ವಂತರಿ ದೇವಿಯ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ನೆರವೇರಿತು.

ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪುರಾಣಿಕ್ ಮುಂದಾಳತ್ವದಲ್ಲಿ ತಲಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್, ಧಾರ್ಮಿಕ ಕಾರ್ಯ ನೆರವೇರಿಸಿದರು.

ಸರ್ಪಸಂಸ್ಕಾರ ವಿಧಿ, ಆಶ್ಲೇಷ ಬಲಿ, ವಾಸ್ತು ರಕ್ಷೋಭ್ಯ ಹೋಮ, ಧನ್ವಂತರಿ ಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪರಿವಾರ ದೈವಗಳಾದ ಮಲರಾಯ, ಧೂಮಾವತಿ-ಬಂಟ, ಅಣ್ಣಪ್ಪ ಪಂಜುರ್ಲಿ, ಸತ್ಯದೇವತೆ, ಗುಳಿಗ ದೈವದ ಪ್ರತಿಷ್ಠಾಪನೆಯು ಪಂಜಳಗುತ್ತುವಿನ ಮನೆಯಲ್ಲಿ ನಡೆಯಿತು. 

ADVERTISEMENT

ಸುನಂದಾ ಪುರಾಣಿಕ್, ನಿರ್ದೇಶಕರಾದ ಸಮೀರ್ ಪುರಾಣಿಕ್, ಪ್ರೀತಿ ಪುರಾಣಿಕ್, ಶಾರದಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.