ADVERTISEMENT

ಸಂಗೀತ: ದೇವರ ಪ್ರಿಯ ಸೇವೆ

ಧರ್ಮಸ್ಥಳದಲ್ಲಿ ಸಂಗೀತ ಕೃತಿಗಳ ಲೋಕಾರ್ಪಣೆ: ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 4:02 IST
Last Updated 15 ಆಗಸ್ಟ್ 2022, 4:02 IST
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಸಂಗೀತ ಕಲಾವಿದರನ್ನು ಗೌರವಿಸಿದರು
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಸಂಗೀತ ಕಲಾವಿದರನ್ನು ಗೌರವಿಸಿದರು   

ಉಜಿರೆ: ಕಲಾಸೇವೆಗಳಿಂದ ದೇವರನ್ನು ಸಾಕ್ಷಾತ್ಕರಿಸಿ ಆರಾಧನೆ ಮಾಡಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಸುರತ್ಕಲ್‌ನ ಮಣಿಕೃಷ್ಣ ಅಕಾಡೆಮಿ ಆಶ್ರಯದಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ರಚಿಸಿ ಪ್ರಕಟಿಸಿದ ‘ಮಂಜುನಾದ’ ಕೃತಿಗಳನ್ನು ಭಾನುವಾರ ಧರ್ಮಸ್ಥಳದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಂಗೀತ ಮತ್ತು ಸ್ತುತಿ ದೇವರಿಗೆ ಪ್ರಿಯವಾಗಿದೆ. ಭಕ್ತರಿಗೆ ನೆಮ್ಮದಿ ದೊರೆತರೆ, ಭಗವಂತನಿಗೂ ತೃಪ್ತಿಯಾಗುತ್ತದೆ ಎಂದರು.

ADVERTISEMENT

ಕಲಾವಿದ ಡಾ. ರಾಜ್‌ಕುಮಾರ್ ಭಾರತಿ, ಅಕಾಡೆಮಿಯ ಕಾರ್ಯದರ್ಶಿ ನಿತ್ಯಾನಂದ ರಾವ್ ಹಾಗೂ ಕಲಾವಿದರನ್ನು ಹೆಗ್ಗಡೆ ಶ್ಲಾಘಿಸಿದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಸಂಗೀತದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವರ್ಧನೆ ಜೊತೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮತ್ತು ಹರಿಕೃಷ್ಣ ಪುನರೂರು,ಉಡುಪಿಯ ಪ್ರೊ. ಅರವಿಂದ ಹೆಬ್ಬಾರ್ ಇದ್ದರು. ಮಣಿಕೃಷ್ಣ ಅಕಾಡೆಮಿ ಅಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಡಾ. ಎಸ್.ಆರ್. ಅರುಣಕುಮಾರ್ ಧನ್ಯವಾದ ಸಲ್ಲಿಸಿದರು. ರಾಮಾಂಜನೇಯ ಮತ್ತು ಶ್ರೀನಿವಾಸರಾವ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.