ADVERTISEMENT

ಧರ್ಮಸ್ಥಳ: ಪಂಚ ಮಹಾವೈಭವ ವೇದಿಕೆ ಕುಸಿದು ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 9:58 IST
Last Updated 14 ಫೆಬ್ರುವರಿ 2019, 9:58 IST
   

ಮಂಗಳೂರು:ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಪ್ರಯುಕ್ತ ನಿರ್ಮಿಸಲಾದ ಪಂಚ ಮಹಾವೈಭವ ವೇದಿಕೆ ಗುರುವಾರ ಕುಸಿದಿದೆ.

ಮಧ್ಯಾಹ್ನ ಊಟದ ವಿರಾಮದ ವೇಳೆ ಈ ಘಟನೆ ನಡೆದಿದ್ದರಿಂದ ಹೆಚ್ಚಿನ ಅನಾಹುತ ಆಗಿಲ್ಲ. ಬಾಲಕ ಹಾಗೂ ಮತ್ತೊಬ್ಬರು ಗಾಯಗೊಂಡಿದ್ದಾರೆ.

ಕುಸಿದಿರುವ ವೇದಿಕೆಒಳಗೆ ಯಾರೂ ಸಿಕ್ಕಿ ಹಾಕಿಕೊಂಡಿಲ್ಲ. ಇಬ್ಬರಿಗಷ್ಟೇ ಸಣ್ಣಪುಟ್ಟ ಗಾಯವಾಗಿದೆ ಎಂದು ದಕ್ಷಿಣ ಕನ್ನಡ ಎಸ್ಪಿ ಲಕ್ಷ್ನೀಪ್ರಸಾದ್ ತಿಳಿಸಿದ್ದಾರೆ.

ADVERTISEMENT
ವೇದಿಕೆ ಕುಸಿದಿರುವುದು.

ಮಹಾಮಸ್ತಕಾಭಿಷೇಕ ಪ್ರಯುಕ್ತ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದ ಬಳಿ ಈ ಭವ್ಯ ವೇದಿಕೆ ನಿರ್ಮಿಸಲಾಗಿತ್ತು. ಮೂರು ದಿನ ಇದೇ ವೇದಿಕೆಯಲ್ಲಿ ಆದಿನಾಥನ ಕಥೆ, ಭರತ-ಬಾಹುಬಲಿ ಅವರ ಜನನ, ವಿದ್ಯಾಭ್ಯಾಸ, ಆದಿನಾಥನ ವೈರಾಗ್ಯ ಸಹಿತ ಹಲವು ಕಥಾನಕಗಳು ನೃತ್ಯ ರೂಪಕದ ಮೂಲಕ ಪ್ರದರ್ಶನಗೊಂಡಿತ್ತು.

ಗುರುವಾರ ಮಧ್ಯಾಹ್ನದ ವರೆಗೆ ಇದೇ ವೇದಿಕೆಯಲ್ಲಿ ನೃತ್ಯ ರೂಪಕ ನಡೆದಿತ್ತು. ಈ ವೇದಿಕೆಯಲ್ಲಿನ ಕಾರ್ಯಕ್ರಮಗಳು ಮುಗಿದು ಎಲ್ಲರೂ ಊಟಕ್ಕೆ ತೆರಳಿದ್ದ ವೇಳೆ ವೇದಿಕೆಯ ಒಂದು ಭಾಗದ ಕಂಬ ಕುಸಿಯಿತು. ನಿಧಾನವಾಗಿ ಚಾವಣಿ ಕುಸಿದುದರಿಂದ ಯಾವುದೇ ದೊಡ್ಡ ಅನಾಹುತ ನಡೆಯಲಿಲ್ಲ.

ವೇದಿಕೆಯ ಪೆಂಡಾಲ್‌ ನೆಲಕ್ಕೆ ಬಿದ್ದಿರುವುದು.
ವೇದಿಕೆ ಕುಸಿದ ಬಳಿಕ ಅದರಡಿ ಸಿಲುಕಿದ್ದವರ ರಕ್ಷಣೆಗೆ ಮುಂದಾದ ಜನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.