ADVERTISEMENT

ಧರ್ಮಸ್ಥಳ ಕೇಸ್: ಡಿ.16ಕ್ಕೆ ಬೆಳ್ತಂಗಡಿಯಲ್ಲಿ ಮಹಿಳಾ ನ್ಯಾಯ ಸಮಾವೇಶ

‘ಕೊಂದವರು ಯಾರು’ ಅಭಿಯಾನದ ನೇತೃತ್ವದಲ್ಲಿ ಮಹಿಳಾ ಜಾಥಾ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 20:29 IST
Last Updated 24 ನವೆಂಬರ್ 2025, 20:29 IST
<div class="paragraphs"><p>ನ್ಯಾಯ?</p></div>

ನ್ಯಾಯ?

   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಮಹಿಳೆಯರ ಮೇಲಿನ ಎಲ್ಲ ದೌರ್ಜನ್ಯ ಪ್ರಕರಣಗಳನ್ನು ಎಸ್‌ಐಟಿ ವ್ಯಾಪ್ತಿಗೆ ತಂದು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಲು ಡಿ.16ರಂದು ಬೆಳ್ತಂಗಡಿಯಲ್ಲಿ ‘ಮಹಿಳಾ ನ್ಯಾಯ ಸಮಾವೇಶ’ ಹಮ್ಮಿಕೊಳ್ಳಲಾಗಿದೆ ಎಂದು ‘ಕೊಂದವರು ಯಾರು’ ಅಭಿಯಾನದ ಸದಸ್ಯೆ ಮಲ್ಲಿಗೆ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನವದೆಹಲಿಯಲ್ಲಿ ನಿರ್ಭಯಾ ಪ್ರಕರಣ ನಡೆದ ದಿನವಾದ ಡಿ.16ಅನ್ನು ಮಹಿಳಾ ಸಂಘಟನೆಗಳು ‘ಅತ್ಯಾಚಾರ ವಿರೋಧಿ ದಿನ’ವಾಗಿ ಆಚರಿಸುತ್ತಿವೆ. ಅದೇ ದಿನ ಬೆಳ್ತಂಗಡಿಯಲ್ಲಿ ಸಮಾವೇಶ ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಮಹಿಳಾ ಸಂಘಟನೆಗಳ ಸದಸ್ಯೆಯರು ಭಾಗವಹಿಸುವರು’ ಎಂದರು.

ADVERTISEMENT

ಎಸ್‌ಐಟಿ ಒತ್ತಡರಹಿತವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಾಕ್ಷಿದಾರರು, ದೂರು ನೀಡಲು ಹೋಗುವವರಿಗೆ ಬೆದರಿಸುವ ಪ್ರಯತ್ನಗಳು ಆಗದಂತೆ ಎಚ್ಚರವಹಿಸಬೇಕು ಎಂದು ಅಭಿಯಾನದ ಸದಸ್ಯೆ ಜ್ಯೋತಿ ಎ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.