ADVERTISEMENT

ಬೆಳ್ತಂಗಡಿ: ಡಿವೈಎಸ್‌ಪಿ ರೋಹಿಣಿ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 4:33 IST
Last Updated 11 ನವೆಂಬರ್ 2025, 4:33 IST
ನೂತನ ಬೆಳ್ತಂಗಡಿ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ರೋಹಿಣಿ ಅವರನ್ನು ಬರಮಾಡಿಕೊಳ್ಳಲಾಯಿತು
ನೂತನ ಬೆಳ್ತಂಗಡಿ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ರೋಹಿಣಿ ಅವರನ್ನು ಬರಮಾಡಿಕೊಳ್ಳಲಾಯಿತು   

ಬೆಳ್ತಂಗಡಿ: ನೂತನವಾಗಿ ಆರಂಭಗೊಂಡ ಇಲ್ಲಿನ ಉಪವಿಭಾಗಕ್ಕೆ ಡಿವೈಎಸ್‌ಪಿಯಾಗಿ ಬೆಂಗಳೂರು ವೈಟ್ ಫೀಲ್ಡ್ ಸೆನ್ ಡಿವೈಎಸ್‌ಪಿಯಾಗಿದ್ದ ರೋಹಿಣಿ ಸಿ.ಕೆ. ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಅವರು ಸೋಮವಾರ ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

ವೃತ್ತ ನಿರೀಕ್ಷಕ ಸುಬ್ಬಾಪುರ ಮಠ್, ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಬೆಳ್ತಂಗಡಿ, ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ, ಕಡಬ, ಉಪ್ಪಿನಂಗಡಿ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್‌ಗಳು ಅವರನ್ನು ಸ್ವಾಗತಿಸಿದರು.

ರೋಹಿಣಿ ಅವರು 2022ರ ಬ್ಯಾಚ್‌ನಲ್ಲಿ ನೇರ ನೇಮಕವಾದ ಡಿವೈಎಸ್‌ಪಿಯಾಗಿದ್ದಾರೆ. ಮೂಲತಃ ಬೆಂಗಳೂರಿನ ಮಲ್ಲೇಶ್ವರಂನವರು. ಜಿಲ್ಲೆಯ ಅತಿ ದೊಡ್ಡ ತಾಲ್ಲೂಕು ಆಗಿರುವ ಬೆಳ್ತಂಗಡಿಗೆ ಮೊದಲ ಬಾರಿಗೆ ಉಪವಿಭಾಗ ತೆರೆಯಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.