ADVERTISEMENT

ಮಂಗಳೂರು | ದಕ್ಕೆಯಲ್ಲಿ ಈದ್‌ ಮಿಲಾದ್‌ಗೆ ರಜೆ ಬ್ಯಾನರ್‌: ವಿಎಚ್‌ಪಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2023, 1:58 IST
Last Updated 25 ಸೆಪ್ಟೆಂಬರ್ 2023, 1:58 IST
   

ಮಂಗಳೂರು: ‘ಈದ್‌ ಮಿಲಾದ್‌ ಪ್ರಯುಕ್ತ ಬಂದರಿನ ಮೀನುಗಾರಿಕಾ ದಕ್ಕೆಯ ಮೀನು ವ್ಯಾಪಾರಿಗಳು ಇದೇ 28ರಂದು ಮುಂಜಾನೆ ಬೆಳಿಗ್ಗೆ 3.45ರ ನಂತರ ಕಡ್ಡಾಯವಾಗಿ ರಜೆ ಮಾಡಬೇಕು. ಇಲ್ಲದಿದ್ದರೆ ಧಕ್ಕೆಯಲ್ಲಿ ಒಂದು ತಿಂಗಳು ಒಂದು ವ್ಯಾಪಾರ ಮಾಡದಂತೆ ಕ್ರಮಕೈಗೊಳ್ಳುತ್ತೇವೆ’ ಎಂದು ಬಂದರಿನ ದಕ್ಷಿಣ ದಕ್ಕೆಯ ಹಸಿ ಮೀನು ವ್ಯಾಪಾರಸ್ಥರ ಸಂಘವು ಬ್ಯಾನರ್‌ ಅಳವಡಿಸಿದೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್‌, ‘ಈ ಬ್ಯಾನರ್‌ ಹಾಕಿದವರ ವಿರುದ್ಧ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು‘ ಎಂದು ಒತ್ತಾಯಿಸಿದೆ.

‘ದಕ್ಕೆಯಲ್ಲಿ ದಂಡನೆ ವಿಧಿಸಲು ಷರಿಯ ಕಾನೂನು ಜಾರಿಯಲ್ಲಿದೆಯೇ? ಇವರ ಬೆದರಿಕೆ ತಂತ್ರಗಳಿಗೆ ಹಿಂದೂ ಮೀನುಗಾರರು ಮಣಿಯಬಾರದು. ನಿಮ್ಮ ಜೊತೆ ಇಡೀ ಹಿಂದೂ ಸಮಾಜ ಇದೆ’ ಎಂದು ವಿಎಚ್‌ಪಿಯ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.