ADVERTISEMENT

ಮಂಗಳೂರು: ವಿವಿಧೆಡೆ ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 14:02 IST
Last Updated 21 ಫೆಬ್ರುವರಿ 2025, 14:02 IST

ಮಂಗಳೂರು: 110/11 ಕೆ.ವಿ ಮೂಡುಬಿದಿರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಬೆಳುವಾಯಿ, ಅಳಿಯೂರು ಮತ್ತು ಶಿರ್ತಾಡಿ ಫೀಡರ್‌ಗಳಲ್ಲಿ ಫೆ.22ರಂದು ‌ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಈ ಕಾರಣದಿಂದ ಅಂದು ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೆ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

24ರಂದು ವ್ಯತ್ಯಯ: 110/ 33/ 11 ಕೆ.ವಿ. ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ನೀರುಮಾರ್ಗ, 11 ಕೆ.ವಿ. ಕುಡುಪು ಹಾಗೂ ತಾರೆತೋಟ (ಪದವು) ಫೀಡರ್‌ನಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕಾಮಗಾರಿ ನಡೆಯಲಿದ್ದು, ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಆಗಲಿದೆ.

ADVERTISEMENT

ಮೂಡುಬಿದಿರೆಯಲ್ಲಿ ವಿದ್ಯುತ್ ವ್ಯತ್ಯಯ: 25ರಂದು ಬೆಳಿಗ್ಗೆ 9.30ರಿಂದ ಸಂಜೆ ‌6ರವರೆಗೆ 110/11 ಕೆ.ವಿ. ಮೂಡುಬಿದಿರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಮೂಡುಬಿದಿರೆ, ಕೋಟೆಬಾಗಿಲು, ಗಾಂಧಿನಗರ, ಗಂಟಾಲ್ ಕಟ್ಟೆ, ಇರುವೈಲು, ಪುಚ್ಚೆಮೊಗರು, ತಾಕೊಡೆ, ಕಡಂದಲೆ, ಹೌದಾಲ್, ತೋಡಾರ್, ನಿಡ್ಡೋಡಿ, ಬೆಳುವಾಯಿ, ಶಿರ್ತಾಡಿ, ಅಳಿಯೂರು ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.