ಮಂಗಳೂರು: ಖೇಲೊ ಇಂಡಿಯಾದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಈಜುಪಟುಗಳಿಗೆ ನಗರದ ಎಮ್ಮೆಕೆರೆ ಈಜುಕೊಳದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಕೋಚ್ ನಟರಾಜ್ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಜುಕೊಳದ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿರುವ ವಿ ಒನ್ ಅಕ್ವಾ ಸೆಂಟರ್‌ನ ಇಬ್ಬರು ಮತ್ತು ಹೊರರಾಜ್ಯದ ಐವರು ಖೇಲೊ ಇಂಡಿಯಾ ಕೂಟಕ್ಕಾಗಿ ಇಲ್ಲಿ ಸಿದ್ಧರಾಗುತ್ತಿದ್ದಾರೆ. ಇವರೊಂದಿಗೆ ರಾಜ್ಯಮಟ್ಟದ 60ಕ್ಕೂ ಹೆಚ್ಚು ತರಬೇತಿ ಪಡೆಯುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟ ಸ್ಪರ್ಧೆಗೆ ಅವರನ್ನು ಸಜ್ಜುಗೊಳಿಸಲು ಪ್ರಯತ್ನ ನಡೆಯುತ್ತಿದೆ ಎಂದರು.
ಸ್ಥಳೀಯ ಪ್ರತಿಭೆಗಳು ಸೌಲಭ್ಯ ಅರಸಿಕೊಂಡು ಬೆಂಗಳೂರಿಗೆ ಹೋಗುವುದನ್ನು ತಪ್ಪಿಸುವುದಕ್ಕಾಗಿ ಎಮ್ಮೆಕೆರೆ ಈಜುಕೊಳದಲ್ಲಿ ತರಬೇತಿ ಕಾರ್ಯಾಗಾರ ಹಾಗೂ ಬೇಸಿಗೆ ಶಿಬಿರ ನಡೆಯುತ್ತಿದೆ ಎಂದು ಕೋಚ್ ಲೋಕರಾಜ್ ವಿ.ಎಸ್ ಅವರು ಹೇಳಿದರು.
ವಿ ಒನ್ ಅಕ್ವಾ ಸೆಂಟರ್‌ನ ನಿರ್ದೇಶಕರಾದ ನವೀನ್ ಮತ್ತು ರೂಪಾ ಜಿ. ಪ್ರಭು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.