ಮೂಡುಬಿದಿರೆ: ಪ್ರೇಮನಗರಿ ಪ್ಯಾರಿಸ್‌ನಲ್ಲಿ ಶುಕ್ರವಾರ ಆರಂಭವಾಗಲಿರುವ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಕರಾವಳಿಯ ಹೆಜ್ಜೆ ಗುರುತುಗಳೂ ಇವೆ. ಪುರುಷ ಮತ್ತು ಮಹಿಳೆಯರ 4x400 ಮೀಟರ್ಸ್ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ತಂಡಗಳಲ್ಲಿ ಒಟ್ಟು ನಾಲ್ವರು ಮತ್ತು ಟ್ರಿಪಲ್ ಜಂಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಒಬ್ಬರು ಇಲ್ಲಿನ ಆಳ್ವಾಸ್ ಕಾಲೇಜಿನಲ್ಲಿ ಅಭ್ಯಾಸ ಮಾಡಿದವರು.
ಭಾರತ ಪುರುಷರ ರಿಲೆ ತಂಡದಲ್ಲಿ ಮುಹಮ್ಮದ್ ಅನಾಸ್, ಮುಹಮ್ಮದ್ ಅಜ್ಮಲ್, ಅಮೋಜ್ ಜೇಕಬ್, ಸಂತೋಷ್ ಕುಮಾರ್, ರಾಜೇಶ್ ರಮೇಶ್ ಮತ್ತು ಮಿಜೊ ಚಾಕೊ ಕುರಿಯನ್ ಇದ್ದಾರೆ. ಮಹಿಳೆಯರ ತಂಡದಲ್ಲಿ ಪೂವಮ್ಮ ರಾಜು, ಜ್ಯೋತಿಕಾ ಶ್ರೀದಂಡಿ, ಶುಭಾ ವೆಂಕಟೇಶನ್, ವಿದ್ಯಾ ರಾಮ್‌ರಾಜ್ ಮತ್ತು ಪ್ರಾಚಿ ಚೌಧರಿ ಇದ್ದಾರೆ. ಈ ಪೈಕಿ ಪೂವಮ್ಮ, ಶುಭಾ, ಸಂತೋಷ್ ಮತ್ತು ಮಿಜೊ ಚಾಕೊ ಇಲ್ಲಿನವರು. ಟ್ರಿಪಲ್ ಜಂಪ್‌ನಲ್ಲಿ ಸ್ಪರ್ಧಿಸುತ್ತಿರುವ ಪ್ರವೀಣ್ ಚಿತ್ರವೇಲ್ ಕೂಡ ಇಲ್ಲೇ ಬೆಳೆದವರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ದತ್ತು ಶಿಕ್ಷಣ ಯೋಜನೆಯಲ್ಲಿದ್ದು ಕ್ರೀಡಾ ಅಭ್ಯಾಸ ಮಾಡಿದ ಇವರ ಪೈಕಿ ನಾಲ್ವರು ಈಗ ಉದ್ಯೋಗದಲ್ಲಿದ್ದಾರೆ. ಪೂವಮ್ಮ ಒಎನ್‌ಜಿಸಿಯಲ್ಲಿ, ಸಂತೋಷ್ ಭಾರತೀಯ ಸೇನೆಯಲ್ಲಿ, ಮಿಜೊ ಚಾಕೊ ಭಾರತೀಯ ವಾಯುಸೇನೆಯಲ್ಲಿ ಮತ್ತು ಶುಭಾ ತಮಿಳುನಾಡು ಪೊಲೀಸ್‌ನಲ್ಲಿದ್ದಾರೆ. ಪ್ಯಾರಿಸ್ ಸೇರಿದಂತೆ ಇಲ್ಲಿಯವರೆಗೆ ಆಳ್ವಾಸ್‌ನಲ್ಲಿ ಓದಿದ ಒಟ್ಟು 11 ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾರತದ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದಾರೆ.
ಕರ್ನಾಟಕದವರಾದ ಪೂವಮ್ಮ ರಾಜು 2016ರ ಒಲಿಂಪಿಕ್ಸ್‌ನಲ್ಲೂ ಭಾರತ ರಿಲೆ ತಂಡದಲ್ಲಿದ್ದರು. ಏಷ್ಯನ್ ಗೇಮ್ಸ್, ಏಷ್ಯನ್ ಚಾಂಪಿಯನ್‌ಷಿಪ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳನ್ನು ಗೆದ್ದಿರುವ ಅವರು ಆಳ್ವಾಸ್ ಕಾಲೇಜ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. 2012ರ ಅಖಿಲ ಭಾರತ ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದರು.
ಸಂತೋಷ್ ತಮಿಳರಸನ್ ತಮಿಳುನಾಡಿನವರು. 2017ರಲ್ಲಿ ಆಳ್ವಾಸ್ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿದ್ದರು. ಗುಂಟೂರಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದ 400 ಮೀಟರ್ಸ್ ಹರ್ಡಲ್ಸ್ ಮತ್ತು 400 ಮೀಟರ್ಸ್ ರಿಲೇಯಲ್ಲಿ ಮಂಗಳೂರು ವಿವಿಗೆ ಚಿನ್ನದ ಪದಕ ತಂದುಕೊಟ್ಟಿದ್ದರು. 2017ರ ಏಷ್ಯನ್ ಚಾಂಪಿಯನ್‌ಷಿಪ್‌ನ 400 ಮೀ ಹರ್ಡಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಸುಭಾ ವೆಂಕಟೇಶನ್ ಕೂಡ ತಮಿಳುನಾಡಿನವರು. 2019ರ ವಿಶ್ವ ಚಾಂಪಿಯನ್‌ಷಿಪ್‌ನ 4x400 ಮೀಟರ್ಸ್ ರಿಲೇಯಲ್ಲಿ ಪಾಲ್ಗೊಂಡಿದ್ದರು. 2022ರ ಏಷ್ಯನ್ ಗೇಮ್ಸ್‌ನ 4x400 ಮೀಟರ್ಸ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2017ರಲ್ಲಿ ಆಳ್ವಾಸ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿನಿಯಾಗಿದ್ದರು. ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೇಟಿಕ್ಸ್‌ನ 400ಮೀ ಓಟ ಮತ್ತು ರಿಲೇಯಲ್ಲಿ ಮಂಗಳೂರು ವಿವಿಗೆ ಚಿನ್ನದ ಪದಕ ತಂದುಕೊಟ್ಟಿದ್ದರು.
ಮಿಜೊ ಚಾಕೊ ಕುರಿಯನ್ ಜನಿಸಿದ್ದು ಮತ್ತು ಬೆಳೆದದ್ದು ಮಂಗಳೂರಿನಲ್ಲಿ. ತಂದೆ ಮತ್ತು ತಾಯಿ ಕೇರಳದವರು. 2022ರ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ 4x400 ಮೀಟರ್ಸ್ ರಿಲೇ ತಂಡದಲ್ಲಿದ್ದರು. 2016ರಲ್ಲಿ ಆಳ್ವಾಸ್ ಕಾಲೇಜಿನಲ್ಲಿ ಪದವಿ ಓದಿದ್ದ ಅವರು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದ 800ಮೀ ಮತ್ತು 400ಮೀ ಓಟದಲ್ಲಿ ಪದಕ ಗೆದ್ದಿದ್ದರು.
ತಮಿಳುನಾಡಿನವರಾದ ಪ್ರವೀಣ್ ಚಿತ್ರವೇಲ್ 2018ರ ಯೂತ್ ಒಲಿಂಪಿಕ್ಸ್, 2022ರ ಕಾಮನ್ವೆಲ್ತ್ ಗೇಮ್ಸ್, 2022ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2017ರಲ್ಲಿ ಆಳ್ವಾಸ್ ಕಾಲೇಜ್ ವಿದ್ಯಾರ್ಥಿಯಾಗಿದ್ದ ಅವರು ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಕೂಟದ ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದರು.
ಆಳ್ವಾಸ್ @ ಪ್ಯಾರಿಸ್
ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಜುಲೈ 27ರಿಂದ ಆರಂಭವಾಗಲಿರುವ ಒಲಿಂಪಿಕ್ಸ್ ಗೆ ಆಳ್ವಾಸ್ ನಿರ್ಮಿಸಿರುವ “5” ಕ್ರೀಡಾ ತಾರೆಗಳು ನಮ್ಮ ದೇಶವನ್ನೂ ಪ್ರತಿನಿಧಿಸುತ್ತಿದ್ದಾರೆ.
ಇಂದು, 77 ಸದಸ್ಯರ ಭಾರತೀಯ ತಂಡವು ಪ್ಯಾರಿಸ್‌ನಲ್ಲಿ ವಿಶ್ವದ ಅತಿದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್ ಪ್ರಾರಂಭವಾಗುತ್ತಿದ್ದಂತೆ "5" ಮಾಜಿ ALVAS ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ.
ಪೂವಮ್ಮ ರಾಜು, ಸಂತೋಷ್ ಕುಮಾರ್ ತಮಿಳರಸನ್, ಸುಭಾ ವೆಂಕಟೇಶನ್, ಪ್ರವೀಣ್ ಚಿತ್ರವೇಲ್ ಮತ್ತು ಮಿಜೋ ಚಾಕೋ ಕುರಿಯನ್
ಪೂವಮ್ಮ ರಾಜು
ಕರ್ನಾಟಕದವರಾದ ಪೂವಮ್ಮ ರಾಜು ಅವರು 2016 ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಸದಸ್ಯರಾಗಿದ್ದರು, 2014 ಮತ್ತು 2018 ರ ಏಷ್ಯನ್ ಗೇಮ್ಸ್ ಮತ್ತು 2013 ಮತ್ತು 2017 ರ ಚಾಂಪಿಯನ್‌ಶಿಪ್‌ನಲ್ಲಿ 400 ಮೀಟರ್ಸ್ ಚಿನ್ನದ ಪದಕ ವಿಜೇತರಾಗಿದ್ದರು.
ಪೂವಮ್ಮ ರಾಜು ಆಳ್ವಾಸ್ ಕಾಲೇಜಿನಲ್ಲಿ ಪಿಜಿ ವಿದ್ಯಾರ್ಥಿಯಾಗಿದ್ದರು, ಅವರು 2012 ರ ಅಖಿಲ ಭಾರತ ವಿಶ್ವವಿದ್ಯಾಲಯ ಕೂಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದಾಗ ಮತ್ತು 400 ಮೀಟರ್‌ಗಳಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 4x400 ಮೀಟರ್ಸ್ ರಿಲೇಯಲ್ಲಿ ಭಾರತದ ಜೆರ್ಸಿ ಧರಿಸಲಿರುವ ಪೂವಮ್ಮ ಆಳ್ವಾಸ್ ಕಾಲೇಜಿನ ಹೆಮ್ಮೆಯ ತಾರೆ.
ಸಂತೋಷ್ ತಮಿಳರಸನ್
(4x400ಮೀ ರಿಲೇ)
ತಮಿಳುನಾಡಿನ ಸುಕ್ಕುಡಿ ಮೂಲದ ಸಂತೋಷ್ ತಮಿಳರಸನ್ 2017 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 400 ಹರ್ಡಲ್ಸ್‌ನಲ್ಲಿ ಭಾರತೀಯ ಜೆರ್ಸಿಯನ್ನು ಧರಿಸಿದ್ದರು.
2017ರಲ್ಲಿ ಆಳ್ವಾಸ್ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿದ್ದ ಸಂತೋಷ್ ತಮಿಳರಸನ್ ಅವರು ಗುಂಟೂರಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ 400 ಮೀಟರ್ಸ್ ಹರ್ಡಲ್ಸ್ ಮತ್ತು 400 ಮೀಟರ್ಸ್ ರಿಲೇಯಲ್ಲಿ ಮಂಗಳೂರು ವಿವಿಗೆ ಚಿನ್ನದ ಪದಕ ಗೆದ್ದಿದ್ದರು.
ಸಂತೋಷ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 4x400 ಮೀಟರ್ಸ್ ರಿಲೇ ತಂಡದ ಸದಸ್ಯರಾಗಿದ್ದಾರೆ ಮತ್ತು ಭಾರತ ವಿಶ್ವ ರ‍್ಯಾಂಕಿಂಗ್‌ನಲ್ಲಿ 6 ನೇ ಸ್ಥಾನದಲ್ಲಿದೆ. ತಂಡದ ಎಲ್ಲ ಸದಸ್ಯರು ಪರಿಪೂರ್ಣ ಪದಕದ ನಿರೀಕ್ಷೆಯಲ್ಲಿದ್ದಾರೆ
ಸುಭಾ ವೆಂಕಟೇಶನ್
(4x400ಮೀ ರಿಲೇ)
ತಮಿಳುನಾಡಿನ ತಿರುಚಿರಾಪಳ್ಳಿ ಮೂಲದ ಸುಭಾ ವೆಂಕಟೇಶನ್ ಅವರು 2019 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 4x400 ರಿಲೇಯಲ್ಲಿ ಭಾರತೀಯ ಜೆರ್ಸಿಯನ್ನು ಧರಿಸಿದ್ದರು.
2022ರ ಏಷ್ಯನ್ ಗೇಮ್ಸ್‌ನಲ್ಲಿ 4x400 ಮೀಟರ್ಸ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ
2017 ರಲ್ಲಿ ಆಳ್ವಾಸ್ ಕಾಲೇಜಿನ ಪದವಿ ವಿದ್ಯಾರ್ಥಿನಿಯಾಗಿದ್ದ ಸುಭಾ ವೆಂಕಟೇಶನ್ ಅವರು 2019 ರಲ್ಲಿ ಗುಂಟೂರಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ 400 ಮೀ ಮತ್ತು 400 ಮೀಟರ್ ರಿಲೇಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಚಿನ್ನದ ಪದಕ ಗೆದ್ದರು, ಅವರು ಆಳ್ವಾಸ್‌ನಿಂದ ವಿಶ್ವ ವಿಶ್ವವಿದ್ಯಾಲಯ ಕೂಟದಲ್ಲಿ ಭಾಗವಹಿಸಿದ್ದರು.
ಸುಭಾ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 4x400mts ರಿಲೇ ತಂಡದ ಸದಸ್ಯರಾಗಿದ್ದಾರೆ, ಎಲ್ಲಾ ತಂಡದ ಸದಸ್ಯರು ಒಲಿಂಪಿಕ್ಸ್‌ನಲ್ಲಿ ಸಂಪೂರ್ಣ ಫೈನಲ್‌ಗಾಗಿ ಆಶಿಸುತ್ತಿದ್ದಾರೆ
ಪ್ರವೀಣ್ ಚಿತ್ರವೇಲ್
ತಮಿಳುನಾಡಿನವರಾದ ಪ್ರವೀಣ್ ಚಿತ್ರವೇಲ್ ಟ್ರಿಪಲ್ ಜಂಪ್ ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ
2018 ಯೂತ್ ಒಲಿಂಪಿಕ್ಸ್,
2022 ಕಾಮನ್‌ವೆಲ್ತ್ ಆಟ
2022ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಪ್ರವೀಣ್, ತಮ್ಮ ವೃತ್ತಿಜೀವನದಲ್ಲಿ ಅತ್ಯುತ್ತಮ ದೂರವನ್ನು ತಲುಪುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.
2017 ರಲ್ಲಿ, ಆಳ್ವಾಸ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಯಾಗಿ, ಅಖಿಲ ಭಾರತ ವಿಶ್ವವಿದ್ಯಾಲಯದ ಕೂಟದಲ್ಲಿ ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು, ಇನ್ನೂ ಆಳ್ವಾಸ್‌ನಲ್ಲಿ ವಿದ್ಯಾರ್ಥಿಯಾಗಿದ್ದರು.
ಪ್ರವೀಣ್ ವರ್ಲ್ಡ್ ಯೂನಿವರ್ಸಿಟಿ ಮೀಟ್ 2019 ರ ಸದಸ್ಯರೂ ಆಗಿದ್ದರು
ಮಿಜೋ ಚಾಕೋ ಕುರಿಯನ್
ಮಿಜೋ ಚಾಕೋ ಕುರಿಯನ್, ಮಲಯಾಳಿ, 2022 ರ ಏಷ್ಯನ್ ಗೇಮ್ಸ್‌ನಲ್ಲಿ 4x400 ರಿಲೇ ತಂಡದ ಸದಸ್ಯರಾಗಿದ್ದರು.
2016 ರಲ್ಲಿ ಕೊಯಮತ್ತೂರಿನ ಆಳ್ವಾಸ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಯಾಗಿದ್ದ ಮಿಜೋ ಅಖಿಲ ಭಾರತ ವಿಶ್ವವಿದ್ಯಾಲಯ ಕೂಟದಲ್ಲಿ 800 ಮೀಟರ್ಸ್ ಮತ್ತು 400 ಮೀಟರ್‌ಗಳಲ್ಲಿ ಪದಕ ವಿಜೇತರಾಗಿದ್ದರು.
2022 ರ ವರ್ಷದ ಕರ್ನಾಟಕ ರಾಜ್ಯ ಕ್ರೀಡಾಪಟು ಎಂದು ಆಯ್ಕೆ ಮಾಡಲಾಗಿದೆ, ಉತ್ತಮ ಸಮಯ 46.1 ಸೆಕೆಂಡ್
ಈ ವಾಯುಪಡೆಯ ತಾರೆ ಪ್ಯಾರಿಸ್ ಒಲಿಂಪಿಕ್ಸ್ ರಿಲೇ ತಂಡದ ಸದಸ್ಯರಾಗಿದ್ದಾರೆ
ಪೂವಮ್ ರಾಜು, ಸಂತೋಷ್ ತಮಿಳರಸನ್, ಪ್ರವೀಣ್ ಚಿತ್ರವೇಲ್,
ಆಳ್ವಾಸ್ ಚೇರ್ಮನ್ ಡಾ.ಮೋಹನ್ ಆಳ್ವ ಅವರಿಂದ ವಿಶೇಷ ಶಿಷ್ಯವೇತನ ಪಡೆದು ಸುಭಾ ವೆಂಕಟೇಶನ್, ಮಿಜೋ ಚಾಕೋ ಎಲ್ಲರಿಗೂ ತರಬೇತಿ ನೀಡಲಾಯಿತು.
ಅವರನ್ನು ಅನುಸರಿಸಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರ ನೇತೃತ್ವದಲ್ಲಿ ಏಕಲವ್ಯ ಸ್ಪೋರ್ಟ್ಸ್ ಅಕಾಡೆಮಿಯ ಸುಮಾರು 50 ಕ್ರೀಡಾ ಶಿಕ್ಷಕರು ಮತ್ತು ತರಬೇತುದಾರರು ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ SAFF ಕ್ರೀಡಾಕೂಟಕ್ಕಾಗಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ ತರಬೇತಿ ಪಡೆದವರು ಹೊಸ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ.
ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತದ ಕ್ರೀಡಾಪಟುಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.