ADVERTISEMENT

ಫ್ಲೆಕ್ಸ್‌ನಲ್ಲಿ ಗೋಡ್ಸೆ, ಸಾವರ್ಕರ್ ಚಿತ್ರ: ಕಾಂಗ್ರೆಸ್‌ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 5:09 IST
Last Updated 19 ಆಗಸ್ಟ್ 2022, 5:09 IST
ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ಅಳವಡಿಸಿರುವ ಫ್ಲೆಕ್ಸ್
ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ಅಳವಡಿಸಿರುವ ಫ್ಲೆಕ್ಸ್   

ಮಂಗಳೂರು/ಉಳ್ಳಾಲ: ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಶ್ರೀಕೃಷ್ಣ ಜನ್ಮಾಷ್ಟಮಿಗೆ ಶುಭಕೋರುವ ಫ್ಲೆಕ್ಸ್‌ನಲ್ಲಿ ನಾಥೂರಾಮ್ ಗೋಡ್ಸೆ ಮತ್ತು ಸಾವರ್ಕರ್ ಚಿತ್ರಗಳನ್ನು ಹಾಕಲಾಗಿದೆ.

ಅಖಿಲ ಭಾರತ ಹಿಂದೂ ಮಹಾಸಭಾ– ಕರ್ನಾಟಕ ಹೆಸರಿನಲ್ಲಿ ನಗರದ ಹೊರವಲಯದ ಸುರತ್ಕಲ್, ಬೈಕಂಪಾಡಿ, ಕೂಳೂರು ಭಾಗದಲ್ಲಿ ಈ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಫ್ಲೆಕ್ಸ್‌ನಲ್ಲಿ ಹಿಂದೂ ಮಹಾಸಭಾದ ಪದಾಧಿಕಾರಿಗಳ ಚಿತ್ರದ ಜತೆಗೆ ಕೊನೆಯಲ್ಲಿ ಶುಭಕೋರುವವರು ರಾಜೇಶ್ ಪವಿತ್ರನ್, ರಾಜ್ಯಾಧ್ಯಕ್ಷರು ಎಂದು ಮುದ್ರಿತವಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ವಿಧಾನ ಪರಿಷತ್ ವಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರು, ‘ಕೊಲೆಗಾರನನ್ನು ಆರಾಧಿಸುವುದು, ಕೊಲೆಗಡುಕರ ಸಂಸ್ಕೃತಿ..! ಮಹಾತ್ಮ ಗಾಂಧಿಯ ಕೊಲೆಗಾರ ಗೋಡ್ಸೆಯ ಆರಾಧಕರಿಗೆ ಹೀಗೆ ಬಹಿರಂಗವಾಗಿ ಫ್ಲೆಕ್ಸ್ ಹಾಕಲು ಒಪ್ಪಿಗೆ ನೀಡಿದವರಾರು? ಮಂಗಳೂರು ಪೊಲೀಸ್ ಕಮಿಷನರ್ ಕೂಡಲೇ ದುಷ್ಕೃರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿ, ಫ್ಲೆಕ್ಸ್ ನೆಪದಲ್ಲಿ ಅಶಾಂತಿ ಸೃಷ್ಟಿಸಲು ಹೊಂಚು ಹಾಕುತ್ತಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದಿದ್ದಾರೆ.

ADVERTISEMENT

ಉಳ್ಳಾಲ ಸಮೀಪ ಕುಂಪಲದಲ್ಲಿ ಹಿಂದೂ ಜಾಗರಣ ವೇದಿಕೆ ಅರಸು ವೈದ್ಯನಾಥ ಘಟಕದ ಹೆಸರಿನಲ್ಲಿ ಸಾವರ್ಕರ್ ಚಿತ್ರ ಇರುವ ಫ್ಲೆಕ್ಸ್‌ ಹಾಕಲಾಗಿದೆ. ಕುಂಪಲ ಮೊಸರುಕುಡಿಕೆ ಉತ್ಸವಕ್ಕೆ ಶುಭಕೋರಿ ಹಾಕಲಾದ ಫ್ಲೆಕ್ಸ್ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.