ADVERTISEMENT

ಮಾಜಿ ಸೈನಿಕ ಸಾವು: ಮೃತದೇಹದ ಜೊತೆ 5 ದಿನ ಕಳೆದ ಮಾನಸಿಕ ಅಸ್ವಸ್ಥ ಸಹೋದರಿಯರು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 17:30 IST
Last Updated 29 ಏಪ್ರಿಲ್ 2020, 17:30 IST
   

ಬಂಟ್ವಾಳ: ಮಾನಸಿಕ ಅಸ್ವಸ್ಥರಾದಇಬ್ಬರು ಸಹೋದರಿಯೊಂದಿಗೆ ಜೀವಿಸುತ್ತಿದ್ದ ಮಾಜಿ ಸೈನಿಕರೊಬ್ಬರು ಮನೆಯಲ್ಲೇ ಮೃತಪಟ್ಟ ಐದು ದಿನಗಳ ಬಳಿಕ ಬೆಳಕಿಗೆ ಬಂದಿದೆ.

ಇಲ್ಲಿನ ಘಟನೆ ಪಂಜಿಕಲ್ಲು ಗ್ರಾಮದ ಪಲ್ಲೊಟ್ಟು ನಿವಾಸಿ ರಿಚಾರ್ಡ್ ಫೆರ್ನಾಂಡೀಸ್(55) ಮೃತಪಟ್ಟ ಮಾಜಿ ಸೈನಿಕ. ಇವರು ಶುಕ್ರವಾರ ರಾತ್ರಿ ಮಲಗಿದಲ್ಲೇ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಅವಿವಾಹಿತ ರಿಚಾರ್ಡ್ ಫೆರ್ನಾಂಡೀಸ್ ತನ್ನ ಇಬ್ಬರು ಅವಿವಾಹಿತೆ ಮಾನಸಿಕ ಅಸ್ವಸ್ಥ ಸಹೋದರಿಯೊಂದಿಗೆವಾಸವಾಗಿದ್ದರು.

ADVERTISEMENT

ರಿಚಾರ್ಡ್ ಪ್ರತಿನಿತ್ಯ ಡೈರಿಗೆ ಹಾಲು ತರುತ್ತಿದ್ದು, ಕೆಲವು ದಿನಗಳಿಂದ ಹೋಗಿಲ್ಲ. ಈ ಬಗ್ಗೆ ಸ್ಥಳೀಯರು ಹೋಗಿ ವಿಚಾರಿಸಿದಾಗ ಮನೆಯಲ್ಲಿ ಕೊಳೆತ ಶವ ಕಂಡು ಬಂದಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.