ADVERTISEMENT

ಪುತ್ತೂರು | ಗಾಂಜಾ ಪೂರೈಕೆ: ಸಹಿತ ಮೂವರ ಬಂಧನ

106 ಕೆ.ಜಿ ಗಾಂಜಾ ಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 8:11 IST
Last Updated 8 ಫೆಬ್ರುವರಿ 2026, 8:11 IST
ದೀಪಕ್ ಪಾತ್ರ 
ದೀಪಕ್ ಪಾತ್ರ    

ಪುತ್ತೂರು: ತಾಲ್ಲೂಕಿನ ಸಂಪ್ಯ ಠಾಣಾ ವ್ಯಾಪ್ತಿಯ ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ ಈಶ್ವರಮಂಗಲ-ಸುಳ್ಯಪದವು ರಸ್ತೆಯಲ್ಲಿ ಜ.19ರಂದು ಕಾರು ಮತ್ತು ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ₹ 53.03 ಲಕ್ಷ ಮೌಲ್ಯದ 106.050 ಕೆ.ಜಿ ಗಾಂಜಾ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಒಡಿಶಾಸ ವ್ಯಕ್ತಿ ಹಾಗೂ ಆರೋಪಿಗಳಿಗೆ ಹಣ ಮತ್ತು ವಾಹನದ ವ್ಯವಸ್ಥೆ ಮಾಡುತ್ತಿದ್ದ ಇಬ್ಬರು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಸಾಗಾಟ ಪ್ರಕರಣ ಪತ್ತೆ ಮಾಡಿದ್ದ ಪೊಲೀಸರು ಆರೋಪಿಗಳಾದ ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾದ ಕಾರು ಚಾಲಕ ರಫೀಕ್ ಪಿ. (37), ಗೂಡ್ಸ್ ವಾಹನದ ಚಾಲಕ ಅಬ್ದುಲ್ ಸಾದಿಕ್ (37) ಎಂಬುವರನ್ನು ಬಂಧಿಸಿದ್ದರು. ಪ್ರಕರಣದ ತನಿಖೆ ಮುಂದುವರಿಸಿದ್ದ ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್ ನೇತೃತ್ವದ ತನಿಖಾ ತಂಡವು ಈ ಆರೋಪಿಗಳಿಗೆ ಗಾಂಜಾವನ್ನು ಪೂರೈಕೆ ಮಾಡುತ್ತಿದ್ದ ಒಡಿಶಾಸ ದೀಪಕ್ ಪಾತ್ರ (37), ಆರೋಪಿಗಳಿಗೆ ಹಣ ಮತ್ತು ವಾಹನದ ವ್ಯವಸ್ಥೆ ಮಾಡಿದ್ದ ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ನಿವಾಸಿ ಮಹಮ್ಮದ್ ಫಯಾಜ್ ಡಿ.ಕೆ. (27) ಮತ್ತು ಕಕ್ಕಿಂಜೆ ನಿವಾಸಿ ನಝೀರ್ (42) ಎಂಬುವರನ್ನು ಬಂಧಿಸಿದ್ದಾರೆ.

ದೀಪಕ್ ಪಾತ್ರನನ್ನು ಒಡಿಶಾದಲ್ಲೇ ಬಂಧಿಸಿದ್ದು, ಈ ವೇಳೆ ಆತನಿಂದ ₹ 80ಸಾವಿರ ಮೌಲ್ಯದ 1.788 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಡಿವೈಎಸ್‌ಪಿ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ನಡೆದ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಸಂಪ್ಯ ಠಾಣೆಯ ಎಸ್ಐ ಗುಣಪಾಲ ಜೆ., ಸಿಬ್ಬಂದಿ ದೇವರಾಜ್, ಹರ್ಷಿತ್‌, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಸುಬ್ರಮಣಿ, ಭೀಮಸೆನ್, ಸುರೇಶ್, ದಿವ್ಯಾಪ್ರಕಾಶ್ ಪಾಲ್ಗೊಂಡಿದ್ದರು.

ಮಹಮ್ಮದ್ ಫಯಾಜ್ ಡಿ.ಕೆ.
ನಝೀರ್ ಕಕ್ಕಿಂಜೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.