ಉಳ್ಳಾಲ: ಇಲ್ಲಿಗೆ ಸಮೀಪದ ತೊಕ್ಕೊಟ್ಟುವಿನ ಗಂಗಾ ಕಾಂಪ್ಲೆಕ್ಸ್‌ನಲ್ಲಿರುವ ಸೂಪರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಆಭರಣ ಮಳಿಗೆಯಿಂದ ಚಿನ್ನದ ಬ್ರೇಸ್‌ಲೆಟ್ ಕಳವಾದ ಬಗ್ಗೆ ಸೆನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಡಿ.5ರಂದು ಸಂಜೆ 6.30ರ ಸುಮಾರಿಗೆ ಬುರ್ಖಾಧಾರಿ ಮಹಿಳೆಯೊಬ್ಬರು ಚಿನ್ನದ ಬ್ರೇಸ್‌ಲೆಟ್ ಖರೀದಿಸಲು ಬಂದಿದ್ದರು. ಆಕೆಗೆ ಚಿನ್ನದ ಬ್ರೇಸ್‌ಲೆಟ್‌ಗಳಿದ್ದ ಟ್ರೇ ತೋರಿಸಿದ್ದೆವು. ಇನ್ನೊಂದು ಟ್ರೇ ತೋರಿಸುವಂತೆ ಕೋರಿದ್ದ ಮಹಿಳೆ ಬಳಿಕ ಏನನ್ನೂ ಖರೀದಿಸದೇ ತೆರಳಿದ್ದರು. ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸಿದಾಗ ಆ ಮಹಿಳೆಯು ಬುರ್ಖಾದ ಎಡ ಕೈ ಒಳಗೆ ಹಾಕಿ ಮೋಸದಿಂದ ಬ್ರೇಸ್‌ಲೆಟ್ ಕಳವು ಮಾಡಿರುವುದು ಕಂಡು ಬಂದಿದೆ. ಅದರ ತೂಕ 14.230 ಮಿಲಿ ಗ್ರಾಂ ಆಗಿದ್ದು, ಅಂದಾಜು ಮೌಲ್ಯ₹ 1ಲಕ್ಷ ಆಗಬಹುದು ಎಂದು ಮಳಿಗೆಯ ವ್ಯವಸ್ಥಾಪಕರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.