ADVERTISEMENT

ರಸ್ತೆ ಬದಿಯಲ್ಲಿ ಸಿಕ್ಕಿದ ಚಿನ್ನ, ನಗದು:ವಾರಸುದಾರರಿಗೆ ನೀಡಿದ ಚಾಲಕ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 12:18 IST
Last Updated 5 ಜುಲೈ 2018, 12:18 IST
 ಪೊಡಿಮೋನ್ ( ಹಮೀದ್)
 ಪೊಡಿಮೋನ್ ( ಹಮೀದ್)   

ಬೆಳ್ತಂಗಡಿ : ರಸ್ತೆ ಬದಿಯಲ್ಲಿ ಸಿಕ್ಕಿದ ಚಿನ್ನ, ನಗದು ಮತ್ತು ಮೊಬೈಲ್ ಫೋನ ಅನ್ನು ವಾರಸುದಾರರಿಗೆ ನೀಡಿ ಗುರುವಾಯನಕೆರೆಯ ಆಟೊ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಇಲ್ಲಿಯ ಪಿಲಿಚಂಡಿಕಲ್ಲು ನಿವಾಸಿ ಪೊಡಿಮೋನ್ ಯಾನೆ ಹಮೀದ್ ಗುರುವಾಯನಕೆರೆಯಲ್ಲಿ ರಿಕ್ಷಾ ಚಾಲಕರಾಗಿದ್ದು, ಇವರು ಅಲ್ಲಿಯೇ ಸಮೀಪದ ಪರಪ್ಪು ಪ್ರದೇಶಕ್ಕೆ ಬಾಡಿಗೆಗೆ ತೆರಳಿದ್ದಾಗ ಈ ಪ್ರಸಂಗ ನಡೆದಿದೆ.‘ ರಸ್ತೆ ಬದಿಯಲ್ಲಿ ಅಂದಾಜು 2 ಲಕ್ಷದ ಚಿನ್ನ, ನಗದು ಹಾಗೂ ಒಂದು ಮೊಬೈಲ್ ಪೋನ್ ಸಿಕ್ಕಿದೆ. ಸ್ವಿಚ್ ಆಫ್ ಆಗಿದ್ದ ಮೊಬೈಲ್ ಫೋನನ್ನು ಸ್ವಿಚ್ ಆನ್ ಮಾಡಿ ಮಾಲೀಕರಿಗೆ ಕರೆ ಮಾಡಿ ಅವರಿಗೆ ಚಿನ್ನ, ನಗದು ಮತ್ತು ಫೋನನ್ನು ವಾಪಸ್‌ ನೀಡಿದ್ದಾರೆ’ ಎಂದು ಸ್ಥಲೀಯರು ತಿಳಿಸಿದ್ದಾರೆ.

ಪುತ್ತೂರಿನ ಬಲ್ನಾಡ್ ಗ್ರಾಮದ ಪ್ರೇಮ ಚಿನ್ನ , ನಗದು, ಫೋನ್‌ ಇವುಗಳ ವಾರಸುದಾರರಾಗಿದ್ದು, ಚಾಲಕ ಪೊಡಿಮೋನ್ ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.