ADVERTISEMENT

ತುಳುನಾಡಿನಲ್ಲಿ ನಾಗರ ಪಂಚಮಿ ಸಡಗರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 5:46 IST
Last Updated 2 ಆಗಸ್ಟ್ 2022, 5:46 IST
ಕುಡುಪು ಕ್ಚೇತ್ರದಲ್ಲಿ ನಾಗನಿಗೆ ಅಭಿಷೇಕ
ಕುಡುಪು ಕ್ಚೇತ್ರದಲ್ಲಿ ನಾಗನಿಗೆ ಅಭಿಷೇಕ    

ಮಂಗಳೂರು: ತುಳುನಾಡಿನಲ್ಲಿ ನಾಗರ ಪಂಚಮಿ ಹಬ್ಬದ ಸಡಗರ. ಬೆಳಗಿನಿಂದಲೇ ಭಕ್ತರು ತಮ್ಮ ಕುಟುಂಬದ ನಾಗಬನಗಳಿಗೆ ತೆರಳಿ ಹಾಲು, ಸಿಯಾಳ ಅಭಿಷೇಕ ಮಾಡಿಸಿ, ತಂಬಿಲ ಅರ್ಪಿಸುತ್ತಿದ್ದಾರೆ.

ಕುಡುಪು, ಪಾವಂಜೆ, ಬೆಳ್ತಂಗಡಿಯ ಬಲ್ಲಮಂಜ ಅನಂತೇಶ್ವರ ಮತ್ತಿತರ ನಾಗ ಕ್ಷೇತ್ರಗಳಲ್ಲಿ ಬೆಳಗಿನಿಂದಲೇ ಭಕ್ತರು ಸರದಿಯಲ್ಲಿ ನಿಂತು ಪೂಜೆ ಸಲ್ಲಿಸುತ್ತಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರದಿಂದ ಭಾರಿ ಮಳೆಯಾಗುತ್ತಿರುವ ಕಾರಣ ಹೊರ ಭಾಗಗಳಿಂದ ಬರುವ ಭಕ್ತರ ಸಂಖ್ಯೆ ಕಡಿಮೆ ಇದೆ.

ADVERTISEMENT

ಕುಕ್ಕೆಯಲ್ಲಿ ದರ್ಪಣತೀರ್ಥ ನದಿ ಉಕ್ಕಿ ಹರಿಯುತ್ತಿದೆ. ಭಕ್ತರು ಎರಡು ದಿನ ದೇಗುಲಕ್ಕೆ ಬರುವುದು‌ ಬೇಡ ಎಂದು ಜಿಲ್ಲಾಡಳಿತ ವಿನಂತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.