ADVERTISEMENT

ಸುಬ್ರಹ್ಮಣ್ಯ:ಕಡಮಕಲ್ಲು ಎಸ್ಟೇಟ್ ಬಳಿ ಭೂಕುಸಿತ, ನದಿಯಲ್ಲಿ ಕೊಚ್ಚಿ ಬಂದ ಮಣ್ಣು,ಮರ

ಮೂರನೇ ಭಾರಿ ಕೊಚ್ಚಿ ಹೋಯ್ತು ಉಪ್ಪುಕಳ ಕಾಲು ಸೇತುವೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 8:16 IST
Last Updated 29 ಆಗಸ್ಟ್ 2022, 8:16 IST
   

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಜಿಲ್ಲೆಯ ಕಡಮಕಲ್ಲು ಎಸ್ಟೇಟ್ ನಿಂದಲೂ ಮೇಲೆ ಪಶ್ಚಿಮ‌ಘಟ್ಟ ಪ್ರದೇಶದಲ್ಲಿ ಭಾನುವಾರ ರಾತ್ರಿ ಭಾರಿ ಮಳೆಗೆ ಪ್ರಮಾಣದ ಭೂ ಕುಸಿತ ಉಂಟಾಗಿದೆ.

ಇಲ್ಲಿನ ನದಿ ನೀರು ತುಂಬಿ ಹರಿಯುತ್ತಿದ್ದು ಮಣ್ಣು ಹಾಗೂ ಮರಗಳು ಕೊಚ್ಚಿಕೊಂಡು ಬಂದಿಬೆ. ಇದರಿಂದಾಗಿ ಕಿಂಡಿ ಅಣೆಕಟ್ಟುಗಳಲ್ಲಿ ತುಂಬಿದೆ.

ಕಲ್ಮಕಾರಿನ ಬೈಲು ಎಂಬಲ್ಲಿ ಕಿಂಡಿ ಅಣೆಕಟ್ಟು ಸಂಪೂರ್ಣ ಮರಗಳಿಂದ ತುಂಬಿದೆ. ಉಪ್ಪುಕಳ ಭಾಗದಲ್ಲೂ ಮಳೆಯಾಗಿದ್ದು ಉಪ್ಪುಕಳದ ಕಾಲು ಸೇತುವೆ ಮತ್ತೆ ಕೊಚ್ಚಿ ಹೋಗಿ ಈ ಮಳೆಗಾಲ ಮೂರನೇ ಭಾರಿ ಸೇತುವೆ ಕೊಚ್ಚಿ ಹೋಗಿರುವುದಾಗಿ ತಿಳಿದುಬಂದಿದೆ.

ಇವನ್ನೂ ಓದಿ:









ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.