ADVERTISEMENT

ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ಗೆ 42 ಪದಕ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 3:03 IST
Last Updated 4 ಡಿಸೆಂಬರ್ 2021, 3:03 IST
ಪದಕ ವಿಜೇತ ಸ್ಕೇಟರ್‌ಗಳು.
ಪದಕ ವಿಜೇತ ಸ್ಕೇಟರ್‌ಗಳು.   

ಮಂಗಳೂರು: ಸ್ಪೀಡ್ ರೋಲರ್ ಸ್ಕೇಟಿಂಗ್‌ನ ರಾಜ್ಯ ಆಯ್ಕೆ ಪ್ರಕ್ರಿಯೆ ಮತ್ತು ಚಾಂಪಿಯನ್‌ಷಿಪ್ -2021-22 ಬೆಂಗಳೂರಿನ ಸಿಟಿ ಅರೇನಾ ಸ್ಕೈಟಿಂಗ್ ರಿಂಕ್‌ನಲ್ಲಿ ನಡೆಯಿತು.

ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ಸ್ಕೇಟರ್ಸ್‌ಗಳು 8 ಚಿನ್ನ, 10 ಬೆಳ್ಳಿ ಮತ್ತು 24 ಕಂಚು ಸೇರಿದಮತೆ ಒಟ್ಟು 42 ಪದಕಗಳನ್ನು ಪಡೆದಿದ್ದಾರೆ. ಎಲ್ಲ ವಿಭಾಗದಲ್ಲಿ 25 ಸ್ಕೇಟರ್‌ಗಳು ಭಾಗವಹಿಸಿದ್ದು, ಮುಹಮ್ಮದ್ ಆರ್ಷದ್ ಶಾಮಿಲ್, ಅರ್ಪಿತ ನಿಶಾಂತ್ ಶೇಟ್, ತನ್ಮಯ್ ಕೊಟ್ಟಾರಿ, ಅರ್ನ ರಾಜೇಶ್, ವಿವೇಕ ಯೋಗರಾಜ್, ಹಿಮಾನಿ ಕೆ ವಿ. ಡಿಸೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಕೇಟಿಂಗ್ ಆಯ್ಕೆ ಪ್ರಕ್ರಿಯೆಗೆ ತೇರ್ಗಡೆ ಹೊಂದಿದ್ದಾರೆ.

ಸ್ಪರ್ಧಾಳುಗಳ ಪೈಕಿ ಸ್ಕೇಟರ್ಸ್‌ಗಳಾದ ಡ್ಯಾನಿಯಲ್ ಸಾಲ್ವಡೋರ್ ಕಾನ್ಸೆಸ್ಸಾವ್ 1 ಬೆಳ್ಳಿ 1 ಕಂಚು, ಮುಹಮ್ಮದ್ ಶಾಮಿಲ್ ಆರ್ಷದ್ 3 ಚಿನ್ನ, ಡ್ಯಾಷಿಯಲ್ ಆಮಂಡ ಕೋನ್ಸೆಸ್ಸೋ 4 ಕಂಚು, ಅರ್ಪಿತಾ ನಿಶಾಂತ್ ಶೇಟ್ 4 ಬೆಳ್ಳಿ, ಧನ್ವಿನ್ ಕೆ. 1 ಕಂಚು, ತನ್ಮಯ್ ಕೊಟ್ಟಾರಿ 2 ಬೆಳ್ಳಿ 1 ಕಂಚು, ಕೃತಿ ಕಯ್ಯ 2 ಕಂಚು, ಅನಘಾ ರಾಜೇಶ್ 1 ಬೆಳ್ಳಿ 2 ಕಂಚು, ನೈವೇದ್ಯ ಪಾಂಡೆ 2 ಕಂಚು, ಹಿಮಾನಿ ಕೆ.ವಿ. 2 ಚಿನ್ನ, ಅರ್ನ ರಾಜೇಶ್ 1ಚಿನ್ನ 1 ಬೆಳ್ಳಿ, ವಿವೇಕ್ 2 ಚಿನ್ನ 1 ಕಂಚು, ಶಮಿತ್ ಶೆಟ್ಟಿ 2 ಕಂಚು, ನಿರ್ಮಯ್ ವೈ.ಎನ್. 1 ಕಂಚು, ಲಕ್ಷ್ಮಣ ಅಡ್ಯಂತಾಯ 1 ಬೆಳ್ಳಿ, ರುಷಭ್ ಮಂಜೇಶ್ವರ 1 ಬೆಳ್ಳಿ, 2 ಕಂಚು, ರಕ್ಷಿತ್ ಜೋಶಿ 2 ಕಂಚು, ಸಂಹಿತ ರಾವ್ 1 ಕಂಚು, ಶಿವಂ ವೈ. ಎನ್. 1 ಕಂಚು ಪಡೆದಿದ್ದಾರೆ.

ADVERTISEMENT

ಎಲ್ಲ ಸ್ಕೇಟರ್‌ಗಳು ಮೋಹನ್ ದಾಸ್ ಮತ್ತು ಜಯರಾಜ್ ಹಾಗೂ ರಮಾನಂದ ಅವರಿಂದ ಫ್ರಾನ್ಸಿಸ್ ಡೋರಿಸ್ ಸ್ಕೇಟ್‌ ಸಿಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.