ADVERTISEMENT

ದಿಢೀರ್ ಕುಸಿದ ಮನೆಯ ಚಾವಣಿ: ಆಶ್ರಯ ಕಳೆದುಕೊಂಡ ಮಹಿಳೆಯ ಕುಟುಂಬ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:35 IST
Last Updated 14 ಫೆಬ್ರುವರಿ 2026, 7:35 IST
ಶೇಖಮಲೆಯ ಸಾಜಿದಾ ಅವರ ಮನೆಯ ಚಾವಣಿ ಕುಸಿದಿದೆ
ಶೇಖಮಲೆಯ ಸಾಜಿದಾ ಅವರ ಮನೆಯ ಚಾವಣಿ ಕುಸಿದಿದೆ   

ಪುತ್ತೂರು: ಮೂವರು ಮಕ್ಕಳೊಂದಿಗೆ ಮಹಿಳೆಯೊಬ್ಬರು ವಾಸ್ತವ್ಯವಿದ್ದ ಮನೆಯೊಂದರ ಚಾವಣಿ ಸಂಪೂರ್ಣವಾಗಿ ಕುಸಿದ ಘಟನೆ ತಾಲ್ಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಶೇಖಮಲೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಘಟನೆ ವೇಳೆ ಮನೆಯೊಳಗಿದ್ದ ತಾಯಿ ಮತ್ತು ಮಕ್ಕಳು ಓಡಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಶೇಖಮಲೆಯ ಸಾಜಿದಾ ಎಂಬುವರಿಗೆ ಸೇರಿದ ಕೆಂಪು ಕಲ್ಲಿನ ಗೋಡೆಯ ಹೆಂಚಿನ ಮನೆಯ ಚಾವಣಿ ಕುಸಿಯುತ್ತಿದ್ದ ಶಬ್ದ ಕೇಳಿ ಸಾಜಿದಾ ಮಕ್ಕಳೊಂದಿಗೆ ಹೊರಗೆ ಓಡಿದ್ದಾರೆ.

ADVERTISEMENT

ಸಾಜಿದಾ ಅವರ ಪತಿ ನಿಧನರಾಗಿದ್ದು, ಸಾಜಿದಾ ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇಬ್ಬರು ಪುತ್ರಿಯರು ಮತ್ತು ಪುತ್ರನೊಂದಿಗೆ ಈ ಮನೆಯಲ್ಲಿ ವಾಸ್ತವ್ಯವಿದ್ದರು. ಆಶ್ರಯ ಕಳೆದುಕೊಂಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಘಟನಾ ಸ್ಥಳಕ್ಕೆ ಒಳಮೊಗ್ರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯ ಶೀನಪ್ಪ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.