ಕಾಸರಗೋಡು: ವ್ಯಕ್ತಿಯೊಬ್ಬನ ಪತ್ನಿಯರು (ಎರಡನೇ ಹಾಗೂ ನಾಲ್ಕನೇ) ಫೇಸ್‌ಬುಕ್‌ನಲ್ಲಿ ಪರಸ್ಪರ ಗೆಳತಿಯರಾದಾಗ ಪತಿಯ ವಂಚನೆ ಬಯಲಾಗಿದೆ.
ಜಿಲ್ಲೆಯ ವೆಳ್ಳರಿಕುಂಡು ನಿವಾಸಿ ದೀಪು ಫಿಲಿಪ್ (36) ವಂಚನೆ ಮಾಡಿ ಸಿಕ್ಕಿಬಿದ್ದವನು. ಪತ್ನಿಯರ ದೂರಿನಂತೆ ಕೇರಳದ ಕೊನ್ನಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾಸರಗೋಡು ನಿವಾಸಿಯಾಗಿದ್ದ ಮಹಿಳೆಯೊಬ್ಬರನ್ನು 10 ವರ್ಷಗಳ ಹಿಂದೆ ವಿವಾಹವಾಗಿದ್ದ ದೀಪು, ಇಬ್ಬರು ಮಕ್ಕಳು ಜನಿಸಿದ ನಂತರ ತಲೆಮರೆಸಿಕೊಂಡಿದ್ದ. ಬಳಿಕ ಕಾಸರಗೋಡಿನ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿ ತಮಿಳುನಾಡಿಗೆ ಕರೆದೊಯ್ದು ಅಲ್ಲಿ ವಾಸವಾಗಿದ್ದ. ನಂತರ ಆಕೆಯನ್ನು ಅಲ್ಲಿ ಬಿಟ್ಟು ಪರಾರಿಯಾಗಿದ್ದ ಆತ, ಎರ್ನಾಕುಲಂನಲ್ಲಿ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದ.
ಅಲ್ಲಿಂದ ಆಲಪ್ಪುಳಕ್ಕೆ ಬಂದ ಆರೋಪಿ ಅಲ್ಲಿನ ಮಹಿಳೆಯೊಬ್ಬರನ್ನು ಮದುವೆಯಾಗಿದ್ದ. ಈ ನಡುವೆ ಎರಡನೇ ಪತ್ನಿ, ಕಾಸರಗೋಡು ನಿವಾಸಿ ಹಾಗೂ ಆಲಪ್ಪುಳ ನಿವಾಸಿ ಮಹಿಳೆ ಫೇಸ್‌ಬುಕ್ ಗೆಳೆತಿಯರಾದಾಗ ಕುಟುಂಬದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಪತಿಯ ವಂಚನೆ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.