ADVERTISEMENT

ಲಕ್ಷದ್ವೀಪದ ಬಳಿ ತಮಿಳುನಾಡಿನ ಬೋಟ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 16:02 IST
Last Updated 28 ಏಪ್ರಿಲ್ 2021, 16:02 IST
ಲಕ್ಷದ್ವೀಪದ ಬಳಿ ಪತ್ತೆಯಾಗಿರುವ ಬೋಟ್‌
ಲಕ್ಷದ್ವೀಪದ ಬಳಿ ಪತ್ತೆಯಾಗಿರುವ ಬೋಟ್‌   

ಮಂಗಳೂರು: ಸಮುದ್ರದಲ್ಲಿ ನಾಪತ್ತೆಯಾಗಿದ್ದ ತಮಿಳುನಾಡಿನ ಮೀನುಗಾರಿಕೆ ಬೋಟ್ ‘ಮರ್ಸಿಡಿಸ್‌’ ಅನ್ನು ಕರಾವಳಿ ಕಾವಲು ಬುಧವಾರ ಪತ್ತೆ ಮಾಡಿದೆ.

ಏ.6 ರಂದು ತಮಿಳುನಾಡಿನ ತೆಂಗಪಟ್ಟಣಂ ಬಂದರಿನಿಂದ 11 ಮೀನುಗಾರರೊಂದಿಗೆ ಹೊರಟಿದ್ದ ಈ ಬೋಟ್‌, ಏ.24 ರಂದು ನಾಪತ್ತೆಯಾಗಿತ್ತು. ಈ ಬಗ್ಗೆ ತಮಿಳುನಾಡು ಮೀನುಗಾರಿಕೆ ಇಲಾಖೆಯಿಂದ ಕರಾವಳಿ ಕಾವಲು ಪಡೆಗೆ ಮಾಹಿತಿ ರವಾನಿಸಲಾಗಿತ್ತು.

ಕಾರ್ಯಪ್ರವೃತ್ತವಾದ ಕರಾವಳಿ ಕಾವಲು ಪಡೆ, ಹೆಲಿಕಾಪ್ಟರ್‌, ಗಸ್ತು ಹಡಗುಗಳ ಮೂಲಕ ಶೋಧ ಕಾರ್ಯ ನಡೆಸಿತ್ತು. ನಾಲ್ಕು ದಿನಗಳ ನಂತರ ಮರ್ಸಿಡಿಸ್‌ ಬೋಟ್‌ ಅನ್ನು ಲಕ್ಷದ್ವೀಪದಿಂದ 200 ನಾಟಿಕಲ್‌ ಮೈಲಿ ದೂರದಲ್ಲಿ ಪತ್ತೆ ಮಾಡಲಾಗಿದೆ. ಬೋಟ್‌ನಲ್ಲಿದ್ದ 11 ಮೀನುಗಾರರು ಸುರಕ್ಷಿತವಾಗಿದ್ದಾರೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.

ADVERTISEMENT

ಸುರಕ್ಷಿತವಾಗಿ ಇರುವ ಬಗ್ಗೆ ಸೆಟ್‌ಲೈಟ್‌ ಫೋನ್‌ ಮೂಲಕ ಬೋಟ್‌ನಲ್ಲಿದ್ದ ಮೀನುಗಾರರು ತಮ್ಮ ಕುಟುಂಬದವರಿಗೂ ಮಾಹಿತಿ ನೀಡಿದ್ದಾರೆ. ಲಕ್ಷದ್ವೀಪದಲ್ಲಿ ನಿಯೋಜಿಸಲಾಗಿರುವ ಕರಾವಳಿ ಕಾವಲು ಪಡೆಯ ಹಡಗನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಅಗತ್ಯ ವೈದ್ಯಕೀಯ, ಆಹಾರದ ನೆರವು ಒದಗಿಸಲಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.