
ಉಜಿರೆ: ಕಡಿರುದ್ಯಾವರ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ನೇತ್ರಾವತಿ ನದಿ ಕಿನಾರೆಯಿಂದ ಪರವಾನಗಿ ಇಲ್ಲದೆ ಹಿಟಾಚಿ ಮೂಲಕ ಟಿಪ್ಪರ್‌ಗೆ ಮರಳು ತುಂಬಿಸಿ ಮಾರಾಟ ಮಾಡುವ ಪ್ರಕರಣ ಪತ್ತೆಯಾಗಿದ್ದು, ಬೆಳ್ತಂಗಡಿ ಪಿಎಸ್‌ಐ ಆನಂದ ಎಂ.ನೇತೃತ್ವದಲ್ಲಿ ಗುರುವಾರ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ, ಹಿಟಾಚಿ ಅಪರೇಟರ್ ಮಹಮ್ಮದ್ ಶಮೀರುದ್ದೀನ್‌ನನ್ನು ವಿಚಾರಿಸಿದಾಗ ಟಿಪ್ಪರ್ ಚಾಲಕನ ಹೆಸರು ಚಾರ್ಮಾಡಿಯ ಹನೀಫ್ ಎಂದು ಮಾಹಿತಿ ನೀಡಿದ್ದಾನೆ.
ಅಕ್ರಮವಾಗಿ ಮರಳು ತುಂಬಿದ್ದ ₹3.5 ಲಕ್ಷ ಮೌಲ್ಯದ ಟಿಪ್ಪರ್, ₹ 2.5 ಲಕ್ಷ ಮೌಲ್ಯದ ಹಿಟಾಚಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಕಕ್ಕಿಂಜೆ ಗ್ರಾಮದ ಚಾರ್ಮಾಡಿ ನಿವಾಸಿಗಳಾದ ಮಹಮ್ಮದ್ ಶಮಿರುದ್ದೀನ್, ಎಚ್.ಹನೀಫ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಡಿವೈಎಸ್‌ಪಿ ರೋಹಿಣಿ ಸಿ.ಕೆ., ಮಾರ್ಗದರ್ಶನದಲ್ಲಿ ಸಿಪಿಐ ಬಿ.ಜಿ.ಸುಬ್ಬಾಪುರಮಠ ನೇತೃತ್ವದಲ್ಲಿ ಎಸ್.ಐ.ಆನಂದ್ ಎಂ. ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.