ಮಂಗಳೂರು: ಇಲ್ಲಿನ ಪಾಲಿಕೆ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ನೂತನ ಕಚೇರಿ ಭಾನುವಾರ ಉದ್ಘಾಟನೆಗೊಂಡಿತು. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಬಂದರ್‌ನ ಕೇಂದ್ರ ಜುಮ್ಮಾ ಮಸೀದಿಯ ಖತೀಬ ರಿಯಾಜ್ ಫೈಜಿ, ಬಿಜೈ ಚರ್ಚ್‌ನ ಧರ್ಮಗುರು ಫಾ.ಜೆ.ಬಿ.ಸಲ್ದಾನ ದೀಪ ಬೆಳಗಿಸಿದರು.
‘ಸಾರ್ವಜನಿಕರ ಅಹವಾಲು ಆಲಿಸಲು ಈ ಕಚೇರಿ ರಜಾ ದಿನಗಳನ್ನು ಹೊರತುಪಡಿಸಿ ಎಲ್ಲಾ ದಿನಗಳಲ್ಲೂ ತೆರೆದಿರಲಿದೆ. ರೈಲು ಸೇವೆ, ಬಸ್ ಸೇವೆ, ಪರಿಸರ, ಪಿಂಚಣಿ ಹೀಗೆ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿ ದೂರು ಪೆಟ್ಟಿಗೆ ಇಡಲಿದ್ದೇವೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿಯೂ ಅಹವಾಲು ಆಲಿಸಲಿದ್ದೇವೆ. ವಾರದಲ್ಲಿ ಎರಡು ದಿನ ನಾನು ಈ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಲಭ್ಯ ಇರುತ್ತೇನೆ’ ಎಂದು ಐವನ್ ಡಿಸೋಜ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಆರ್ಥಿಕ ನೆರವು ಸೇರಿದಂತೆ ವಿವಿಧ ಸವಲತ್ತುಗಳನ್ನು ಹಸ್ತಾಂತರಿಸಲಾಯಿತು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಮುಖಂಡರಾದ ಜೆ.ಆರ್.ಲೊಬೊ, ಸುರೇಶ್ ಬಲ್ಲಾಳ್, ಅಶ್ರಫ್, ಅಪ್ಪಿ ಶಾಹುಲ್ ಹಮೀದ್, ಜಾನ್ಸನ್ ಸಿಕ್ವೇರಾ, ಪದ್ಮನಾಭ ಅಮೀನ್ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.