ADVERTISEMENT

ಮಂಗಳೂರು| ಜೆಇಇ ಮೇನ್ಸ್: ಬೋಸ್ಕೊಸ್‌ ಉತ್ತಮ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 5:45 IST
Last Updated 9 ಫೆಬ್ರುವರಿ 2023, 5:45 IST
ರಕ್ಷಿತ್‌
ರಕ್ಷಿತ್‌   

ಮಂಗಳೂರು: ನಗರದ ಬ್ಲೂಬೆರಿ ಹಿಲ್ಸ್ ಸಮೀಪದ ಹರಿಪದವಿನಲ್ಲಿರುವ ಬೋಸ್ಕೊಸ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

2023ರ ಜನವರಿಯಲ್ಲಿ ನಡೆದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಬೋಸ್ಕೊಸ್‌ ಪದವಿಪೂರ್ವ ಕಾಲೇಜಿನ 37 ವಿದ್ಯಾರ್ಥಿಗಳು ಹಾಜರಾಗಿದ್ದರು. ಅವರಲ್ಲಿ ಅಖಿಲ್ ಮೆನನ್ (99.65 ಪರ್ಸಂಟೈಲ್), ಧೃತಿ (99.34), ಮಹನ್ಯಾ ಬಿ.ಕೆ (97.65), ರಕ್ಷಿತ್ ಎಸ್.ಭಟ್ (96.30), ಗಗನ್ ಜೆ.ಯು. (93.67), ಮೃಣಾಲ್ ಕೃಷ್ಣ ಜೆ. (91.25), ಆದರ್ಶ್ (91.05), ಕ್ಷಮಾ ಎನ್. (90.75), ಶ್ರದ್ಧಾ ಸಿ.ಎಸ್ (90.28) ಶೇ 90ಕ್ಕಿಂತ ಹೆಚ್ಚು ಪರ್ಸಂಟೈಲ್‌ ಗಳಿಸಿದ್ದಾರೆ.

ಅತ್ಯುತ್ತಮ ಪರ್ಸಂಟೈಲ್‌ ಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಎಸ್.ಎಸ್ ಬೋಸ್ಕೊ, ಆಡಳಿತ ಮಂಡಳಿ ಸದಸ್ಯರಾದ ಎಜಿತಿನ್ ಬೋಸ್ಕೊ, ಪ್ರಾಂಶುಪಾಲರಾದ ಡಾ.ವಿಜಯ ಕುಮಾರಿ, ಉಪಪ್ರಾಂಶುಪಾಲರಾದ ರಾಜ್‍ಕಿರಣ್, ಉಪನ್ಯಾಸಕ - ಉಪನ್ಯಾಸಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.