ADVERTISEMENT

ಅರವಿಂದ ಚೊಕ್ಕಾಡಿ ಅವರ ‘ಕಬೀರನಾದ ಕುಬೇರ’ ಕೃತಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 5:57 IST
Last Updated 2 ಏಪ್ರಿಲ್ 2023, 5:57 IST
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅರವಿಂದ ಚೊಕ್ಕಾಡಿ ಅವರ ‘ಕಬೀರನಾದ ಕುಬೇರ’ ಕೃತಿಯನ್ನು ನಾ. ಮೊಗಸಾಲೆ ಬಿಡುಗಡೆಗೊಳಿಸಿದರು. ಪುಂಡಿಕಾಯ್ ಗಣಪಯ್ಯ ಭಟ್, ಸಂಪತ್ ಸಾಮ್ರಾಜ್ಯ, ಡಾ.ಸುಕನ್ಯಾ ಮೇರಿ ಇದ್ದರು
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅರವಿಂದ ಚೊಕ್ಕಾಡಿ ಅವರ ‘ಕಬೀರನಾದ ಕುಬೇರ’ ಕೃತಿಯನ್ನು ನಾ. ಮೊಗಸಾಲೆ ಬಿಡುಗಡೆಗೊಳಿಸಿದರು. ಪುಂಡಿಕಾಯ್ ಗಣಪಯ್ಯ ಭಟ್, ಸಂಪತ್ ಸಾಮ್ರಾಜ್ಯ, ಡಾ.ಸುಕನ್ಯಾ ಮೇರಿ ಇದ್ದರು   

ಮೂಡುಬಿದಿರೆ: ‘ಅರವಿಂದ ಚೊಕ್ಕಾಡಿ ಅವರು ತನ್ನಲ್ಲಿರುವ ಅದ್ಭುತ ಚಿಂತನೆ ಗಳನ್ನು ಬರವಣಿಗೆ ರೂಪಕ್ಕಿಳಿಸಿದ ಬೌದ್ಧಿಕ ಕ್ರಾಂತಿಕಾರಿ. ಅವರು ಜನಮನ್ನಣೆಯ ಸಾಹಿತಿಯಾಗಿ ಪ್ರಸಿದ್ಧಿ ಪಡೆದರು’ ಎಂದು ಸಾಹಿತಿ ನಾ. ಮೊಗಸಾಲೆ ಹೇಳಿದರು.

ಇಲ್ಲಿನ ಸಮಾಜ ಮಂದಿರದಲ್ಲಿ ಕಾರ್ನಾಡ್ ಸದಾಶಿವ ರಾವ್ ಕುರಿತ ‘ಕಬೀರನಾದ ಕುಬೇರ’ ಎಂಬ ಅರವಿಂದ ಚೊಕ್ಕಾಡಿ ಅವರ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಸಮಾಜಮುಖಿ ಚಿಂತನೆಯುಳ್ಳ ಅವರ ಬರವಣಿಗೆಗಳು ಸಮಾಜವನ್ನು ಬೇರೆ ಬೇರೆ ಸ್ತರಗಳಲ್ಲಿ ಎಚ್ಚರಿಸಿ, ಮೇಲೆತ್ತುವ ಪ್ರಯತ್ನವನ್ನು ಮಾಡಿದೆ. ಒಬ್ಬ ವ್ಯಕ್ತಿಯ ಬಗ್ಗೆ ಬರೆಯುವುದು ಸವಾಲಿನ ಕೆಲಸವಾದರೂ ಕಾರ್ನಾಡ್ ಸದಾಶಿವರಾವ್ ಅವರ ವ್ಯಕ್ತಿತ್ವವನ್ನು ತನ್ನ ಕೃತಿಯಲ್ಲಿ ಸಮಗ್ರವಾಗಿ ತೆರೆದಿಟ್ಟಿದ್ದಾರೆ’ ಎಂದರು.

ADVERTISEMENT

ಕೃತಿ ಪರಿಚಯ ಮಾಡಿದ ಇತಿಹಾಸ ತಜ್ಞ ಪುಂಡಿಕಾಯಿತಿ ಗಣಪಯ್ಯ ಭಟ್, ‘ದಕ್ಷಿಣ ಭಾರತದ ಗಾಂಧಿ ಎಂದೇ ಜನಪ್ರಿಯರಾಗಿದ್ದ ಕಾರ್ನಾಡ್ ಸದಾಶಿವ ರಾವ್ ಬದುಕಿದ್ದು ಕೇವಲ 56 ವರ್ಷವಾದರೂ ಅವರ ಬದುಕಿನ ದಾರಿಗಳನ್ನು ಕೇಳುವಾಗ ಆಶ್ಚರ್ಯ ಉಂಟುಮಾಡುತ್ತದೆ. ರಾಜಕಾರಣಿಯಾಗಿ, ಸಮಾಜ ಸುಧಾರಕರಾಗಿ ಕೆಲಸ ಮಾಡಿದ ಕಾರ್ನಾಡ್ ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಚಾಲನೆ ಕೊಟ್ಟ ದೇಶಪ್ರೇಮಿ. ದೇಶದ ಹಿತಕ್ಕೋಸ್ಕರ ಅತೀ ಔದಾರ್ಯವಂತರಾದರು. ಅಗರ್ಭ ಶ್ರೀಮಂತರಾಗಿದ್ದರೂ ಜೀವಿತದ ಕೊನೆಯ ಅವಧಿಯಲ್ಲಿ ಮನೆ ಮಠಗಳನ್ನು ಕಳೆದುಕೊಳ್ಳಬೇಕಾಯಿತು. ಇದನ್ನು ಅರವಿಂದ ಚೊಕ್ಕಾಡಿಯವರು ‘ಕಬೀರನಾದ ಕುಬೇರ’ ಎಂಬ ಕೃತಿಯಲ್ಲಿ ಸಮಗ್ರವಾಗಿ ತೆರೆದಿಟ್ಟಿದ್ದಾರೆ’ ಎಂದರು.

ಸಮಾಜ ಮಂದಿರ ಸಭಾದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆ ವಹಿಸಿದರು. ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುಕನ್ಯಾ ಮೇರಿ ಜೆ. ಆಶಯ ಭಾಷಣ ಮಾಡಿದರು. ಅಂಡಾರು ಗುಣಪಾಲ ಹೆಗ್ಡೆ ಸ್ವಾಗತಿಸಿದರು. ಗಣೇಶ್ ಕಾಮತ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.