ADVERTISEMENT

ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಸಮಾಪನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 7:37 IST
Last Updated 1 ಡಿಸೆಂಬರ್ 2025, 7:37 IST
ಕಂಬಳ ಓಟದ ನೋಟ
ಕಂಬಳ ಓಟದ ನೋಟ   

ಬಂಟ್ವಾಳ: ಇಲ್ಲಿನ ಉಳಿ ಗ್ರಾಮದ ಕಕ್ಯಪದವು ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಶನಿವಾರ ಆರಂಭವಾದ 13ನೇ ವರ್ಷದ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಭಾನುವಾರ ಸಮಾಪನಗೊಂಡಿತು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಹರೀಶ್ ಪೂಂಜ, ಉದ್ಯಮಿ ಸಂದೇಶ್ ಶೆಟ್ಟಿ, ಆರ್.ಚೆನ್ನಪ್ಪ ಕೋಟ್ಯಾನ್, ಬೆಳ್ತಂಗಡಿ ಪೊಲೀಸ್ ಉಪವಿಭಾಗದ ಅಧೀಕ್ಷಕಿ ರೋಹಿಣಿ ಕೆ., ಪ್ರಮುಖರಾದ ಕಿರಣ್ ಪುಷ್ಪಗಿರಿ, ಕಿರಣ್ ಮಂಜಿಲ, ಜಯಪ್ರಕಾಶ್ ಜೆ.ಎಸ್., ಭುವನೇಶ್ ಪಚ್ಚಿನಡ್ಕ, ರವೀಂದ್ರ ಕಂಬಳಿ, ಪ್ರಮೋದ್ ಕುಮಾರ್ ರೈ, ಪ್ರಭಾಕರ ಪ್ರಭು, ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ, ಗೆಳೆಯರ ಬಳಗದ ಅಧ್ಯಕ್ಷ ದಿನೇಶ್ ಪೂಜಾರಿ ಕುಕ್ಕಾಜೆ  ಭಾಗವಹಿಸಿದ್ದರು.

ಕಂಬಳ ತೀರ್ಪುಗಾರ ಸುದರ್ಶನ್ ನಾಯ್ಕ ಕಂಪ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಫಲಿತಾಂಶ: 117 ಜೊತೆ ಕೋಣಗಳು ಭಾಗವಹಿಸಿದ್ದು, ಕನೆಹಲಗೆ ವಿಭಾಗ- ನಾಲ್ಕು ಜತೆ, ಅಡ್ಡಹಲಗೆ ವಿಭಾಗ- 4, ಹಗ್ಗ ಹಿರಿಯ ವಿಭಾಗ 11, ನೇಗಿಲು ಹಿರಿಯ ವಿಭಾಗದಲ್ಲಿ 27, ಹಗ್ಗ ಕಿರಿಯ ವಿಭಾಗ 20 ಜತೆ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ 51 ಜತೆ ಕೋಣಗಳು ಭಾಗವಹಿಸಿದ್ದವು.

ಕನಹಲಗೆ ಪ್ರಥಮ: ರಾಯಿ ಶೀತಾಳ ರೂಪಾ ರಾಜೇಶ್ ಶೆಟ್ಟಿ, ದ್ವಿತೀಯ: ಪಾತಿಲ ಹೊಸಮನೆ ರವಿರಾಜ ಶೆಟ್ಟಿ, ತೃತೀಯ: ವಿಟ್ಲ ಪಂಚಲಿಂಗೇಶ್ವರ ಬಸವನಗುಡಿ ಕುಸುಮ ಪದ್ಮನಾಭ, ಚತುರ್ಥ: ನಿಡ್ಡೋಡಿ ಕಾನ ರಾಮ ಸುವರ್ಣ.

ಅಡ್ಡ ಹಲಗೆ: ಪ್ರಥಮ– ನಾರ್ಯಗುತ್ತು ಕುವೆತ್ತಬೈಲು ಸಂತೋಷ್ ರೈ ಬೋಳಿಯಾರ್, ಹಲಗೆ ಮೆಟ್ಟಿದವರು: ಬೈಂದೂರು ಮಹೇಶ್ ಪೂಜಾರಿ. ದ್ವಿತೀಯ: ನಾರಾವಿ ಯುವರಾಜ ಜೈನ್, ಹಲಗೆ ಮೆಟ್ಟಿದವರು ಭಟ್ಕಳ ಹರೀಶ್, ಹಗ್ಗ ಹಿರಿಯ: ಪ್ರಥಮ- ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್, ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ, ದ್ವಿತೀಯ- ಮಾಳ ಆನಂದ ನಿಲಯ ಶೇಖರ ಎ.ಶೆಟ್ಟಿ, ಓಡಿಸಿದವರು: ಕಾವೂರು ದೋಟ ಸುದರ್ಶನ್.

ಹಗ್ಗ ಕಿರಿಯ: ಪ್ರಥಮ- ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ.ಶೆಟ್ಟಿ ಎ. ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ, ದ್ವಿತೀಯ- ಎರ್ಮಾಳ್ ಡಾ.ಚಿಂತನ್ ರೋಹಿತ್ ಹೆಗ್ಡೆ, ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ. ನೇಗಿಲು ಹಿರಿಯ: ಪ್ರಥಮ- ಮಹಮ್ಮಾಯಿ ಕಲ್ಲೇರಿ ಪಂಜಿಕುಡೇಲುಗುತ್ತು ನಾರಾಯಣ ಪೂಜಾರಿ, ಓಡಿಸಿದವರು: ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್, ದ್ವಿತೀಯ- ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ, ಓಡಿಸಿದವರು: ಬೈಂದೂರು ಮಂಜುನಾಥ ಗೌಡ, ನೇಗಿಲು ಕಿರಿಯ: ಪ್ರಥಮ-ಬೊಳ್ಳೂರು ಮಠ ಸದಾಶಿವ ಬಾಬು ಶೆಟ್ಟಿ, ಓಡಿಸಿದವರು: ಹೊಕ್ಕಾಡಿಗೋಳಿ ಕೀರ್ತೇಶ್, ದ್ವಿತೀಯ- ತೆಳ್ಳಾರು ಅರಂತೊಟ್ಟುಗುತ್ತು ತನಿಷ್ಕ್ ಸದಾಶಿವ ಶೆಟ್ಟಿ, ಓಡಿಸಿದವರು: ಕೊರಿಂಜೆ ಅರುಣ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.