ADVERTISEMENT

ಕಂಬಳ ಕೂಟ ಆಯೋಜನೆ ಸುಲಭವಲ್ಲ: ವಸಂತ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 5:34 IST
Last Updated 20 ಅಕ್ಟೋಬರ್ 2025, 5:34 IST
ಬಂಟ್ವಾಳ ತಾಲ್ಲೂಕಿನ ಸಿದ್ದಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡು ಕರೆಯಲ್ಲಿ ಭಾನುವಾರ ‘ಸ್ನೇಹಕೂಟ ಕಂಬಳ’ ನಡೆಯಿತು
ಬಂಟ್ವಾಳ ತಾಲ್ಲೂಕಿನ ಸಿದ್ದಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡು ಕರೆಯಲ್ಲಿ ಭಾನುವಾರ ‘ಸ್ನೇಹಕೂಟ ಕಂಬಳ’ ನಡೆಯಿತು   

ಬಂಟ್ವಾಳ: ತುಳುನಾಡಿನಲ್ಲಿ ಓಟದ ಕೋಣಗಳಿಗೆ ತರಬೇತಿ ನೀಡಿ ಮಕ್ಕಳಂತೆ ಸಾಕುವುದೂ ಸೇರಿದಂತೆ ಕಂಬಳ ಕೂಟ ಆಯೋಜಿಸುವುದೂ ಕಷ್ಟದಾಯಕ ಎಂದು ವಾಮದಪದವು ವಲಯ ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ಹೇಳಿದರು.

ಇಲ್ಲಿನ ಸಿದ್ದಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಮಧ್ವ ರವಿ ಎಂಟರ್ ಪ್ರೈಸಸ್ ಸಹಿತ ಬೆಂಗಳೂರು ತುಳುನಾಡ ನೆನಪು ಗ್ರೂಪ್ ಮತ್ತು ಪ್ರಣವ್ ಫೌಂಡೇಷನ್ ವತಿಯಿಂದ  ಭಾನುವಾರ ನಡೆದ ‘ಸ್ನೇಹಕೂಟ ಕಂಬಳ’ದಲ್ಲಿ ಅವರು ಮಾತನಾಡಿದರು.

ವಕೀಲ ರಕ್ಷಿತ್ ಜೈನ್ ಕಂಬಳ ಉದ್ಘಾಟಿಸಿದರು.

ADVERTISEMENT

ಟ್ರಸ್ಟ್ ಅಧ್ಯಕ್ಷ ಯಾದೇಶ್ ರೈ ಮಧ್ವಗುತ್ತು, ತುಳುನಾಡ್ ಅಧ್ಯಕ್ಷ ರಾಕೇಶ್ ರೈ, ಕಾರ್ಯದರ್ಶಿ ನಾಗರಾಜ ಹೆಬ್ಬಾರ್, ಕೋಶಾಧಿಕಾರಿ ಮಂಜುನಾಥ್ ಭಟ್, ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿದರು.

ಕ್ಲಬ್‌ನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಸದಸ್ಯ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಕಾರ್ಯದರ್ಶಿ ಶಶಿಧರ್ ಶೆಟ್ಟಿ ಕಲ್ಲಾಪು, ಸ್ಥಳದಾನಿ ಓಬಯ ಪೂಜಾರಿ, ಕೊರಗಪ್ಪ ಪೂಜಾರಿ, ಚಂದ್ರಶೇಖರ ಕೊಡಂಗೆ, ಜನಾರ್ದನ ಬಂಗೇರ ತಿಮರಡ್ಕ, ಶಂಕರ ಶೆಟ್ಟಿ ಬೆದ್ರಮಾರ್ ಭಾಗವಹಿಸಿದ್ದರು.

ಅಗಲಿದ ಓಟದ ಕೋಣಗಳಿಗೆ ನುಡಿ ನಮನ ಸಲ್ಲಿಸಲಾಯಿತು. ಗಣೇಶ್ ಶೆಟ್ಟಿ ಸ್ವಾಗತಿಸಿ, ಮೇಘಶ್ರೀ ಯಾದೇಶ್ ರೈ ವಂದಿಸಿದರು. ನೇಗಿಲು ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ 78 ಜತೆ ಕೋಣಗಳು ಭಾಗವಹಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.