ADVERTISEMENT

ಕಂಬಳಕ್ಕೆ ಸರ್ಕಾರದ ಮಾನ್ಯತೆ ದಿಟ್ಟ ಹೆಜ್ಜೆ: ರಮಾನಾಥ ರೈ

ಸಿದ್ಧಕಟ್ಟೆ ಕೊಡಂಗೆ: ಎರಡನೇ ವರ್ಷದ ರೋಟರಿ ಕಂಬಳ ಸಮಾಪನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 7:04 IST
Last Updated 14 ಅಕ್ಟೋಬರ್ 2025, 7:04 IST
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಕೊಡಂಗೆಯಲ್ಲಿ ಭಾನುವಾರ ರಾತ್ರಿ ಸಮಾರೋಪಗೊಂಡ ರೋಟರಿ ಕಂಬಳ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಮಾಜಿ ಗವರ್ನರ್ ಎನ್.ಪ್ರಕಾಶ್ ಕಾರಂತ್ ಅವರನ್ನು ಸನ್ಮಾನಿಸಲಾಯಿತು
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಕೊಡಂಗೆಯಲ್ಲಿ ಭಾನುವಾರ ರಾತ್ರಿ ಸಮಾರೋಪಗೊಂಡ ರೋಟರಿ ಕಂಬಳ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಮಾಜಿ ಗವರ್ನರ್ ಎನ್.ಪ್ರಕಾಶ್ ಕಾರಂತ್ ಅವರನ್ನು ಸನ್ಮಾನಿಸಲಾಯಿತು   

ಬಂಟ್ವಾಳ: ಹಲವು ಸಂಕಷ್ಟ ಮತ್ತು ಕಾನೂನು ತೊಡಕು ಎದುರಿಸುತ್ತಾ ಬಂದಿರುವ ಕಂಬಳ ಕ್ರೀಡೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗೊಂಡ ದಿಟ್ಟ ನಿರ್ಧಾರದಿಂದ ಕ್ರೀಡಾ ಮಾನ್ಯತೆ ಲಭಿಸಿದೆ. ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಪಡೆಯಲು ಇದು ಸಹಕಾರಿಯಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಬಿ.ರಮಾನಾಥ ರೈ ಹೇಳಿದರು.

ಇಲ್ಲಿನ ಸಿದ್ಧಕಟ್ಟೆ ಕೊಡಂಗೆ ಎಂಬಲ್ಲಿ ಭಾನುವಾರ ರಾತ್ರಿ ಸಮಾರೋಪಗೊಂಡ ಎರಡನೇ ವರ್ಷದ ‘ರೋಟರಿ ಕಂಬಳ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್, ಬಂಟ್ವಾಳ, ಮೊಡಂಕಾಪು, ಸಿದ್ಧಕಟ್ಟೆ ಫಲ್ಗುಣಿ, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಗ್ರಾಮೀಣ ಕೃಷಿಕರ ಕ್ರೀಡೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ ಎಂದರು.

ADVERTISEMENT

ಕೃಷಿಕ ಸುರೇಶ ಬಳ್ನಾಡು, ಕಂಬಳದ ಸಾರಥ್ಯ ವಹಿಸಿದ್ದ ಮಾಜಿ ಸಹಾಯಕ ಗವರ್ನರ್ ಎಲ್ಯಾಸ್ ಸ್ಯಾಂಕ್ಟಿಸ್, ಜಿಲ್ಲಾ ಮಾಜಿ ಗವರ್ನರ್ ಎನ್.ಪ್ರಕಾಶ ಕಾರಂತ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್‌ ಮಾತನಾಡಿ, ಮುಂಬರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡುವುದರ ಜೊತೆಗೆ ಭವಿಷ್ಯದಲ್ಲಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಮಾದರಿಯ ಕಂಬಳ ನಡೆಯಬಹುದು ಎಂದರು.

ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಕೂಳೂರು, ಜಿಲ್ಲಾ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಲೋಕೇಶ ಶೆಟ್ಟಿ ಮುಚ್ಚೂರು, ರೋಟರಿ ಜಿಲ್ಲಾ ಮಾಜಿ ಗವರ್ನರ್ ಕೃಷ್ಣ ಶೆಟ್ಟಿ, ಡಾ.ದೇವದಾಸ್ ರೈ ಮಾತನಾಡಿದರು.

ಪ್ರಮುಖರಾದ ಜಯ ಕುಮಾರ್ ಶೆಟ್ಟಿ, ಕೆ.ಪದ್ಮನಾಭ ರೈ, ಉಮೇಶ್ ರಾವ್ ಮಿಜಾರು, ನಾರಾಯಣ ಹೆಗ್ಡೆ, ರಾಜಗೋಪಾಲ ರೈ, ಡಾ.ಆತ್ಮರಂಜನ್ ರೈ, ಜಯರಾಮ ರೈ, ಅಶ್ವನಿ ಕುಮಾರ್ ರೈ, ಡಾ.ಸೂರ್ಯನಾರಾಯಣ ಕುಕ್ಕಾಡಿ, ಡಾ.ಶಿವಪ್ರಸಾದ್, ಅವಿಲ್ ಮಿನೇಜಸ್, ಎಂ.ಪದ್ಮರಾಜ ಬಲ್ಲಾಳ್, ಬಸ್ತಿ ಮಾಧವ ಶೆಣೈ, ಯಾಸೀರ್ ಕಲ್ಲಡ್ಕ, ದುರ್ಗಾದಾಸ್‌ ಶೆಟ್ಟಿ ಕರೆಂಕಿಜೆ, ಟೀನಾ ಡಿಕೋಸ್ತ, ಪ್ರೀಮಾ ವೈಲೆಟ್ ಫರ್ನಾಂಡಿಸ್‌, ‌ಪ್ರಸನ್ನ ರಾವ್, ಭಾಸ್ಕರ ರೈ ಕಟ್ಟ, ವಿಕಾಸ್ ಕೋಟ್ಯಾನ್, ಬಿ.ಪ್ರಕಾಶ್ ಬಾಳಿಗಾ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಸುರೇಂದ್ರ ಬಿ.ಕಂಬಳಿ ಫರಂಗಿಪೇಟೆ, ರವಿ ಜಲಾನ್, ಸಂದೀಪ್ ಶೆಟ್ಟಿ ಪೊಡುಂಬ, ಶಶಿಧರ ಶೆಟ್ಟಿ ಕಲ್ಲಾಪು, ಭುವನೇಶ್ ಪಚ್ಚಿನಡ್ಕ, ವಸಂತ ಶೆಟ್ಟಿ ಕೇದಗೆ, ರವೀಂದ್ರ ಶೆಟ್ಟಿ ಉಳಿದೊಟ್ಟು, ಸುಜಾತ ಪದ್ಮನಾಭ ರೈ, ಶ್ರುತಿ ಮಾಡ್ತಾ, ಅಂಟೋನಿ ಸಿಕ್ವೇರ, ಅರುಣ್ ಶೆಟ್ಟಿ ಬಜ್ಪೆ, ರಾಜೇಶ ಶೆಟ್ಟಿ ಸೀತಾಳ, ಕಿರಣ್ ಕುಮಾರ್ ಮಂಜಿಲ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ರಾಜೇಶ ಶೆಟ್ಟಿ ಕೊನೆರೊಟ್ಟು, ಮೈಕೆಲ್ ಡಿಕೋಸ್ತ, ಜನಾರ್ದನ ಬಂಗೇರ ತಿಮರಡ್ಕ, ಶೇಖರ ಶೆಟ್ಟಿ ಬದ್ಯಾರು, ವಿಜಯ ಕುಮಾರ್ ಕಂಗಿನಮನೆ, ಎಡ್ತೂರು ರಾಜೀವ ಶೆಟ್ಟಿ, ಚಂದ್ರಶೇಖರ್ ಕೊಡಂಗೆ, ಸಂತೋಷ್ ಕುಮಾರ್ ಚೌಟ, ರಾಜೇಶ್ ಭಾಗವಹಿಸಿದ್ದರು.

ವಿಜಯ ಫರ್ನಾಂಡಿಸ್‌ ಸ್ವಾಗತಿಸಿ, ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು. ಸುರೇಶ ಶೆಟ್ಟಿ ಸಿದ್ಧಕಟ್ಟೆ ಮತ್ತು ರಾಘವೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.