ADVERTISEMENT

ಕಕ್ಯಪದವು: ಶ್ರೀನಿವಾಸ ಗೌಡ ಮತ್ತೆ ಹ್ಯಾಟ್ರಿಕ್‌ ಸಾಧನೆ

ಮೈರ ‘ಸತ್ಯ-ಧರ್ಮ’ ಕಂಬಳ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 5:03 IST
Last Updated 29 ಮಾರ್ಚ್ 2021, 5:03 IST
ಕಕ್ಯಪದವು ಮೈರ 'ಸತ್ಯ-ಧಮ೯ ' ಜೋಡುಕರೆ ಕಂಬಳ ದೖಶ್ಯ.
ಕಕ್ಯಪದವು ಮೈರ 'ಸತ್ಯ-ಧಮ೯ ' ಜೋಡುಕರೆ ಕಂಬಳ ದೖಶ್ಯ.   

ಬಂಟ್ವಾಳ: ಇಲ್ಲಿನ ಕಕ್ಯಪದವು ಮೈರ ಎಂಬಲ್ಲಿ ಶನಿವಾರ ಆರಂಭಗೊಂಡ 8ನೇ ವರ್ಷದ ‘ಸತ್ಯ - ಧರ್ಮ’ ಜೋಡುಕರೆ ಬಯಲು ಕಂಬಳ ಭಾನುವಾರ ಸಂಜೆ ಮುಕ್ತಾಯಗೊಂಡಿತು. ಈ ಕಂಬಳದಲ್ಲೂ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ.

ಹಗ್ಗ ಹಿರಿಯ, ಹಗ್ಗ ಕಿರಿಯ ಮತ್ತು ನೇಗಿಲು ಹಿರಿಯ ವಿಭಾಗದ ಕೋಣಗಳನ್ನು ಓಡಿಸಿದ ಶ್ರೀನಿವಾಸ ಗೌಡ ಮೂರೂ ವಿಭಾಗದಲ್ಲೂ ಪ್ರಥಮ ಬಹುಮಾನ ಪಡೆದಿದ್ದಾರೆ.

ಕಂಬಳದಲ್ಲಿ ಒಟ್ಟು 155 ಜತೆ ಕೋಣಗಳು ಭಾಗವಹಿಸಿದ್ದವು. ಕನೆ ಹಲಗೆಯಲ್ಲಿ 2 ಜತೆ, ಅಡ್ಡಹಲಗೆಯಲ್ಲಿ 5 ಜತೆ, ಹಗ್ಗ ಹಿರಿಯದಲ್ಲಿ 12 ಜತೆ, ನೇಗಿಲು ಹಿರಿಯದಲ್ಲಿ 21 ಜತೆ, ಹಗ್ಗ ಕಿರಿಯದಲ್ಲಿ 18 ಜತೆ, ನೇಗಿಲು ಕಿರಿಯದಲ್ಲಿ 97 ಜತೆ ಕೋಣಗಳು ಭಾಗವಹಿಸಿವೆ.

ADVERTISEMENT

ಫಲಿತಾಂಶ– ಕನೆಹಲಗೆ: ಕೋಟ ಪಡುಕೆರೆ ಶೀನ ಪೂಜಾರಿ (ಹಲಗೆ ಮೆಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್– 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ.)

ಅಡ್ಡ ಹಲಗೆ: ಪ್ರಥಮ– ವಾಲ್ಪಾಡಿ ಹಾಲಾಜೆ ಲೂಯಿಸ್ ಲಾರೆನ್ಸ್ ಸಲ್ಡಾನ (ಹಲಗೆ ಮೆಟ್ಟಿದವರು– ಬೈಂದೂರು ಮಹೇಶ್ ಪೂಜಾರಿ), ದ್ವಿತೀಯ– ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ (‌ಹಲಗೆ ಮೆಟ್ಟಿದವರು– ಬಂಗಾಡಿ ಕುದ್ಮನ್ ಲೋಕಯ್ಯ ಗೌಡ)

ಹಗ್ಗ ಹಿರಿಯ: ಪ್ರಥಮ– ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ‘ಎ’ (ಓಡಿಸಿದವರು– ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ), ದ್ವಿತೀಯ– ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ‘ಬಿ’ (ಓಡಿಸಿದವರು– ಮಾರ್ನಾಡ್ ರಾಜೇಶ್)

ಹಗ್ಗ ಕಿರಿಯ: ಪ್ರಥಮ– ಮೂಡುಬಿದಿರೆ ನ್ಯೂ ಪಡಿವಾಳ್ಸ್ ಹಾರ್ದಿಕ್ ಹರ್ಷ ವರ್ಧನ ಪಡಿವಾಳ್ (ಓಡಿಸಿದವರು– ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ದ್ವಿತೀಯ– ಸರಪಾಡಿ ಮಿಯಾರು ಸುರೇಶ್ ಶೆಟ್ಟಿ (ಓಡಿಸಿದವರು– ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ.ಶೆಟ್ಟಿ)

ನೇಗಿಲು ಹಿರಿಯ: ಪ್ರಥಮ– ಪಡ್ಡಾಯೂರುಗುತ್ತು ಮಿಹಿರ್ ಸತ್ಯನಾರಾಯಣ ಶೆಟ್ಟಿ (ಓಡಿಸಿದವರು– ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ದ್ವಿತೀಯ– ಸರಪಾಡಿ ಕೆಳಗಿನಬಳ್ಳಿ ಲಿಯೊ ಫೆರ್ನಾಂಡಿಸ್ (ಓಡಿಸಿದವರು– ನಕ್ರೆ ಗಿರೀಶ್)

ನೇಗಿಲು ಕಿರಿಯ: ಪ್ರಥಮ– ಮರೋಡಿ ಕೆಳಗಿನಮನೆ ಕೃತೇಶ್ ಅಣ್ಣಿ ಪೂಜಾರಿ (ಓಡಿಸಿದವರು– ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ), ದ್ವಿತೀಯ– ಮೂಡುಬಿದಿರೆ ನ್ಯೂ ಪಡಿವಾಳ್‌ ಶ್ರುತಿ ಹಾರ್ದಿಕ್ ಪಡಿವಾಳ್ (ಓಡಿಸಿದವರು– ಪೆರಿಂಜೆ ಪ್ರಮೋದ್ ಕೋಟ್ಯಾನ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.