ಉಳ್ಳಾಲ: ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿ ವಿಶೇಷ ಅಭಿವೃದ್ಧಿ ಆಗಿದ್ದು, ಸಂಯೋಜಕ ಅಂಗಗಳನ್ನು ಚಲಿಸುವುದು ಹಾಗೂ ಗಾಯಗಳನ್ನು ನಿರ್ವಹಿಸುವಲ್ಲಿ ಪ್ರಗತಿ ಆಗಿದೆ ಎಂದು ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಕೈ ಮತ್ತು ಮೈಕ್ರೋವ್ಯಾಸ್ಕ್ಯುಲರ್ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಭಾಸ್ಕರಾನಂದ್ ಕುಮಾರ್ ಅಭಿಪ್ರಾಯಪಟ್ಟರು.
ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆರ್ಥೋಪೆಡಿಕ್ ವೈದ್ಯಕೀಯ ವಿಭಾಗ ವತಿಯಿಂದ ಅಸಾಮಿ ಇಂಡಿಯಾ, ಕೆಒಎ ಮತ್ತು ಸಿಒಎಸ್ ಮಂಗಳೂರು ಸಂಸ್ಥೆಗಳ ಆಶ್ರಯದಲ್ಲಿ ಕಣಚೂರು ಆಸ್ಪತ್ರೆಯಲ್ಲಿ ಶನಿವಾರ ನಡೆದ ‘ಎಲಿಜಾರೋವ್’ ಉಪಕರಣದ ಬಗ್ಗೆ ನಿರಂತರ ವೈದ್ಯಕೀಯ ಶಿಕ್ಷಣ ಮತ್ತು ಕೈಚಳಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿ ರೋಗಿಯನ್ನೂ ನಮ್ಮದೇ ಕುಟುಂಬದ ಸದಸ್ಯನಂತೆ ನೋಡಿಕೊಳ್ಳಬೇಕು. ಕೌಶಲಕ್ಕೆ ಸೀಮಿತವಾಗದೆ, ಕರ್ತವ್ಯವೂ ಮುಖ್ಯವಾಗಿದೆ. ಹೊಸ ತಂತ್ರಜ್ಞಾನಗಳು ಅಪಾರ ಸಾಧ್ಯತೆಗಳನ್ನು ಒದಗಿಸಿದರೂ, ಪ್ರತಿಯೊಂದು ವಿಧಾನಕ್ಕೂ ತನ್ನದೇ ಆದ ಸಂಕೀರ್ಣತೆ ಮತ್ತು ಅಡಚಣೆಗಳಿವೆ. ನಿರ್ವಹಣೆಯಲ್ಲೂ ಪೂರ್ಣತೆಯಲ್ಲೂ ಪರಿಣತಿ ಸಾಧಿಸಲು ನಿರಂತರ ಅಧ್ಯಯನ, ಅನುಭವ ಮತ್ತು ಸಮರ್ಪಿತ ಶ್ರಮ ಅಗತ್ಯ ಎಂದರು.
ಕಣಚೂರು ವೈದ್ಯಕೀಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಚೇರ್‌ಮೆನ್ ಯು.ಕೆ.ಮೋನು ಅಧ್ಯಕ್ಷತೆ ವಹಿಸಿದ್ದರು.
ಕಣಚೂರ್ ಆರೋಗ್ಯ ವಿಜ್ಞಾನಗಳ ಸಲಹಾ ಮಂಡಳಿ ಅಧ್ಯಕ್ಷ ಡಾ.ಮೊಹಮ್ಮದ್ ಇಸ್ಮಾಯಿಲ್ ಮಾತನಾಡಿದರು.
ಕಣಚೂರು ಹೆಲ್ತ್ ಸೈನ್ಸ್ ಸಲಹಾ ಮಂಡಳಿ ಸದಸ್ಯ ಪ್ರೊ.ವೆಂಕಟರಾಯ್ ಪ್ರಭು, ಕಣಚೂರು ವೈದ್ಯಕೀಯ ಆಸ್ಪತ್ರೆ, ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಪ್ರೊ. ಶಹ್ನವಾಝ್ ಮಣಿಪಾಡಿ, ವೈದ್ಯಕೀಯ ಅಧೀಕ್ಷಕ ಪ್ರೊ.ಹರೀಶ್ ಶೆಟ್ಟಿ, ಕೊಚ್ಚಿಯ ಅಸ್ಟರ್ ಮೆಡಿಸಿಟಿಯ ಸೀನಿಯರ್ ಕನ್ಸಲ್ಟೆಂಟ್ ಡಾ.ಚೆರಿಯನ್ ಕೊವೂರು, ಪಾಲಕ್ಕಾಡ್ ತಂಗಮ್ ಆಸ್ಪತ್ರೆಯ ಹಿರಿಯ ಕನ್ಸಲ್ಟೆಂಟ್ ಡಾ.ಪಿ.ಎನ್.ವಾಸುದೇವನ್, ಮುಖ್ಯ ಆಡಳಿತಾಧಿಕಾರಿ ಡಾ.ರೋಹನ್ ಎಸ್.ಮೋನಿಸ್, ವಿಭಾಗ ಮುಖ್ಯಸ್ಥ ಡಾ.ಜಲಾಲುದ್ದೀನ್ ಎಂ.ವಿ. ಭಾಗವಹಿಸಿದ್ದರು.
ಆರ್ಥೋಪೆಡಿಕ್ ವಿಭಾಗದ ಮುಖ್ಯಸ್ಥ ಡಾ.ಸಲಾವುದ್ದೀನ್ ಆರಿಫ್ ಕೆ.ಸ್ವಾಗತಿಸಿದರು. ಡಾ.ಮಹಮ್ಮದ್ ತಮೀಸ್, ಸುಹಾನಭಾನು ನದಾಫ್ ಕಾರ್ಯಕ್ರಮ ನಿರ್ವಹಿಸಿದರು. ಡಾ.ಅವಿನಾಶ್ ಕುಮಾರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.