ADVERTISEMENT

ಅಶ್ವತ್ಥದ ಎಲೆಯಲ್ಲಿ ಮೂಡಿದ ಕಾಂತಾರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 2:59 IST
Last Updated 17 ಜನವರಿ 2023, 2:59 IST
ಶಿವ ಪ್ರಶಾಂತ್ ಆಚಾರ್ಯ ಅವರ ಕೈಯಲ್ಲಿ ಅರಳಿದ ಕಲೆ
ಶಿವ ಪ್ರಶಾಂತ್ ಆಚಾರ್ಯ ಅವರ ಕೈಯಲ್ಲಿ ಅರಳಿದ ಕಲೆ   

ಬಂಟ್ವಾಳ: ಇಲ್ಲಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಶಿವಾಜಿನಗರ ಎಂಬಲ್ಲಿ ಕಲಾವಿದ ಶಿವಪ್ರಶಾಂತ ಅವರು ಅಶ್ವತ್ಥ ಮರದ ಎಲೆಯಲ್ಲಿ ಸೃಜನಾತ್ಮಕ ಕಲಾಕೃತಿಗಳನ್ನು ರಚಿಸುವ ಮೂಲಕ ಗಮನ ಸೆಳೆದಿದ್ದಾರೆ.

ಈ ಅಪರೂಪದ ಕಲೆಗೆ ವಿಶೇಷ ತಾಳ್ಮೆ ಮತ್ತು ಸೃಜನಶೀಲತೆ ಅಗತ್ಯವಿದ್ದು, ಈಗಾಗಲೇ ತನ್ನ ಕೈಚಳಕದಲ್ಲಿ ಶ್ರೀ ಕೃಷ್ಣ, ಅಯ್ಯಪ್ಪ ಸ್ವಾಮಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಪೊಳಲಿ ಶ್ರೀ ರಾಜರಾಜೇಶ್ವರಿ, ಗಣಪತಿ, ಶಿವ, ದೇವಿ, ನಿತ್ಯಾನಂದ ಸ್ವಾಮಿ, ಕಾಂತಾರ ಸಿನೆಮಾದ ವರಾಹರೂಪ ಪಂಜುರ್ಲಿ ದೈವ, ಅಂಬೇಡ್ಕರ್, ನರೇಂದ್ರ ಮೋದಿ, ಚಾರ್ಲಿ ಚಾಪ್ಲಿನ್, ಹುಲಿ ಚಿತ್ರ ಮೂಡಿ ಬಂದಿದೆ.

ತೆಂಗಿನ ಹಸಿ ಗರಿಯಲ್ಲಿ ಕೂಡ ಚಿತ್ರಗಳು ರೂಪ ಪಡೆದುಕೊಂಡಿವೆ. ಬ್ಯಾಂಕ್ ಉದ್ಯೋಗಿಯಾಗಿರುವ ಅವರು ಯೂಟ್ಯೂಬ್‌ನಲ್ಲಿ ಇಂತಹ ಕಲೆ ಬಗ್ಗೆ ತಿಳಿದುಕೊಂಡು ವಿದ್ಯೆ ಕರಗತ ಮಾಡಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.