
ಮೂಲ್ಕಿ: ಇಲ್ಲಿನ ಸಸಿಹಿತ್ಲು ಗ್ರಾಮದಲ್ಲಿ ಪುನರ್ ನಿರ್ಮಾಣಗೊಂಡಿರುವ ಶಿಲಾಮಯ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಕಾಂತಾಬಾರೆ ಬುದಾಬಾರೆ ಗುಡಿಯನ್ನು ಲೋಕಾರ್ಪಣೆ ಮಾಡಲಾಯಿತು.
ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಬಿ.ಕರ್ಕೇರ, ಮೋಹಿತಾಕ್ಷಿ ದಂಪತಿ ಕಾರ್ಯಕ್ರಮ ಉದ್ಘಾಟಿಸಿದರು. ಪಠೇಲ್ ದಿ.ಜಿ.ಯಾದವ ಬಂಗೇರ ಮನೆತನದ ತಿಲೋತ್ತಮ ಮಾತನಾಡಿದರು.
ರಂಗನಾಥ್ ಭಟ್ ಅವರು ಧ್ವಜಸ್ತಂಭ ಪ್ರತಿಷ್ಠಾ ಕಲಶಾಭಿಷೇಕದ ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು. ಅನ್ನಸಂತರ್ಪಣೆ ನಡೆಯಿತು.
ಸಂಜೆ ಕಲಶಾಧಿವಾಸ, ಮೊಗ ಮೂರ್ತಿಗಳ ಕಲಶಾಧಿವಾಸ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಸಸಿಹಿತ್ಲು ಭಗವತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಅಧ್ಯಕ್ಷ ವಾಮನ ಇಡ್ಯಾ, ಕರ್ಕೇರ ಮೂಲಸ್ಥಾನದ
ಲೀಲಾ ಸಮೃತ್ ಕುಮಾರ್,
ದೈವಸ್ಥಾನದ ಆಡಳಿತ ಸಮಿತಿದ ಅಧ್ಯಕ್ಷ ಜಗನ್ನಾಥ್ ಕೋಟ್ಯಾನ್, ಉಪಾಧ್ಯಕ್ಷ ಅನಿಲ್ ಪೂಜಾರಿ, ಮುಂಬೈ ಸಮಿತಿಯ ಸತೀಶ್ ಎನ್.ಕೋಟ್ಯಾನ್, ಪಠೇಲರ ಮನೆತನದ ನಿರಂಜನ್ ಬಂಗೇರ, ಲೀಲಾಧರ ಬಂಗೇರ, ಪದ್ಮನಾಭ ಬಂಗೇರ, ಪ್ರಧಾನ ಅರ್ಚಕ ತೋಚೋಡಿ ಶೇಖರ ಪೂಜಾರಿ, ಮಂಜೋಡಿ ದೇವು ಗುರಿಕಾರ ಎಸ್.ದಯಾನಂದ್, ದಾಮೋದರ ಪೂಜಾರಿ, ಸುರೇಶ್ ಪೂಜಾರಿ, ಮಹಿಳಾ ಸಮಿತಿಯ ಶಕುಂತಳ ಭೋಜ ಬಂಗೇರ,
ಪುಷ್ಪಾ ದಯಾನಂದ್, ಊರಿನ ಪ್ರಮುಖರು, ಸಮಿತಿಯ ಸದಸ್ಯರು ಭಾಗವಹಿಸಿದ್ದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.