ADVERTISEMENT

ಕಾಪು ಸಮುದ್ರದಲ್ಲಿ ಭೂತಾಯಿ ಮೀನಿನ ಸುಗ್ಗಿ: ಅಂದಾಜು ಮೌಲ್ಯ ₹ 30 ಲಕ್ಷ!

​ಪ್ರಜಾವಾಣಿ ವಾರ್ತೆ
Published 14 ಮೇ 2022, 14:02 IST
Last Updated 14 ಮೇ 2022, 14:02 IST
ಬಲೆಗೆ ಬಿದ್ದ 30 ಟನ್‌ಗೂ ಅಧಿಕ ಭೂತಾಯಿ ಮೀನು
ಬಲೆಗೆ ಬಿದ್ದ 30 ಟನ್‌ಗೂ ಅಧಿಕ ಭೂತಾಯಿ ಮೀನು   

ಕಾಪು (ಉಡುಪಿ ಜಿಲ್ಲೆ): ಕಾಪು ಸಮುದ್ರದಲ್ಲಿ ಶುಕ್ರವಾರ ಮೀನುಗಾರರ ಬಲೆಗೆ ರಾಶಿ ರಾಶಿ ಭೂತಾಯಿ ಮೀನುಗಳು ಬಿದ್ದಿವೆ.

ಕೈಪುಂಜಾಲನ ಓಂ ಸಾಗರ್ ಜೋಡು ದೋಣಿಯ ಮೀನುಗಾರರು ಹಾಕಿದ ಬಲೆಗೆ 30 ಟನ್‌ಗೂ ಅಧಿಕ ಭೂತಾಯಿ ಮೀನು ಬಿದ್ದಿದ್ದು 30 ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ.

ಅಸಾನಿ ಚಂಡ ಮಾರುತದಿಂದ ಕಡಲು ಪ್ರಕ್ಷ್ಯುಬ್ದ ಗೊಂಡಿರುವ ಕಾರಣ ಗಂಗೊಳ್ಳಿಯಿಂದ ಮಂಗಳೂರಿನ ಕರಾವಳಿಯವರೆಗೆ ಹೇರಳವಾಗಿ ಭೂತಾಯಿ ಮೀನು ಕಾಣಿಸಿಕೊಳ್ಳುತ್ತಿವೆ ಎಂದು ಮೀನುಗಾರರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.