ADVERTISEMENT

Karnataka Rains | ಉಳ್ಳಾಲ: ಮರ, ವಿದ್ಯುತ್ ಕಂಬ ಉರುಳಿ ಆಟೊ ರಿಕ್ಷಾಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 6:53 IST
Last Updated 27 ಜುಲೈ 2025, 6:53 IST
<div class="paragraphs"><p> ಆಟೊ ರಿಕ್ಷಾ ಮೇಲೆ&nbsp;ವಿದ್ಯುತ್ ಕಂಬ ಬಿದ್ದಿರುವ ದೃಶ್ಯ</p></div>

ಆಟೊ ರಿಕ್ಷಾ ಮೇಲೆ ವಿದ್ಯುತ್ ಕಂಬ ಬಿದ್ದಿರುವ ದೃಶ್ಯ

   

ಉಳ್ಳಾಲ (ದಕ್ಷಿಣ ಕನ್ನಡ): ಸೋಮೇಶ್ವರ ಪುರಸಭೆ ವ್ಯಾಪ್ತಿಯ ಜಾಯ್ ಲ್ಯಾಂಡ್ ಶಾಲೆಯ ಸಮೀಪದ ಕೊಲ್ಯ ಸಾರಸ್ವತ ಕಾಲೊನಿಯಲ್ಲಿ ಭಾರಿ ಮಳೆಗೆ ಮರವೊಂದು ಭಾನುವಾರ ನಸುಕಿನಲ್ಲಿ ವಿದ್ಯುತ್ ತಂತಿಯ ಮೇಲೆ ಬಿದ್ದು, ಮೂರು ವಿದ್ಯುತ್ ಕಂಬಗಳು ಉರುಳಿವೆ. ಒಂದು ವಿದ್ಯುತ್ ಕಂಬವು ಆಟೊ ರಿಕ್ಷಾದ ಮೇಲೆ ಉರುಳಿದ್ದು, ಪಲ್ಟಿಯಾದ ರಿಕ್ಷಾ ಹಾನಿಗೊಳಗಾಗಿದೆ.

ಹಾನಿಗೊಂಡ ರಿಕ್ಷಾ ಮಾಧವ ಗಟ್ಟಿ ಎಂಬವರಿಗೆ ಸೇರಿದ್ದಾಗಿದೆ. ಮೂರು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿದ ಪರಿಣಾಮ ಸೋಮೇಶ್ವರ-ತೊಕ್ಕೊಟ್ಟು ಒಳಪೇಟೆ ರಸ್ತೆಯಲ್ಲಿ ವಾಹನ‌ ಸಂಚಾರಕ್ಕೆ ಅಡ್ಡಿ ಉಂಟಾಯಿತು. ನಸುಕಿನಲ್ಲಿ ಘಟನೆ ಸಂಭವಿಸಿದ್ದರಿಂದ ಸ್ಥಳದಲ್ಲಿ ಯಾರೂ ಇರಲಿಲ್ಲ. ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.