ಮಂಗಳೂರು: ನಗರದ ಮಂಗಳಾ ಸ್ವಿಮ್ಮಿಂಗ್ ಕ್ಲಬ್ ಸಂಸ್ಥೆಯು 35 ವರ್ಷ ಪೂರೈಸಿದ ಸಲುವಾಗಿ ಮಂಗಳಾ ಕ್ರೀಡಾಂಗಣದ ಬಳಿ ಇರುವ ಪಾಲಿಕೆ ಈಜುಕೊಳದಲ್ಲಿ ಇದೇ 12ರಂದು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ರಾಜ್ಯಮಟ್ಟದ ಮೆಡಲಿಸ್ಟ್ ಹಾಗೂ ನಾನ್ ಮೆಡಲಿಸ್ಟ್ ಈಜು ಸ್ಪರ್ಧೆಯನ್ನು ಏರ್ಪಡಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಮಂಗಳಾ ಸ್ವಿಮ್ಮಿಂಗ್ ಕ್ಲಬ್ ಅಧ್ಯಕ್ಷ ಪ್ರಮುಖ್ ರೈ. ‘ಅಂತಾರರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಪದಕ ವಿಜೇತರು ಸೇರಿ 350ಕ್ಕೂ ಹೆಚ್ಚು ಸ್ಪರ್ಧಾಳುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 50ಕ್ಕೂ ಹೆಚ್ಚು ತೀರ್ಪುಗಾರರು ಹಾಗೂ ಅಧಿಕಾರಿಗಳು ಸ್ಪರ್ಧೆಯನ್ನು ಯಶಸ್ವಿಯಾಗಿ ಸಂಘಟಿಸಲು ನೆರವಾಗಲಿದ್ದಾರೆ. ಬಾಲಕರು, ಬಾಲಕಿಯರು, ಪುರುಷರು, ಮಹಿಳೆಯರ ವಿಭಾಗಗಳಲ್ಲಿ 6 ವರ್ಷ ಮೇಲಿನ ಮಕ್ಕಳಿಂದ ಹಿಡಿದು ಹಿರಿಯ ಈಜುಪಟುಗಳವರೆಗೆ ವಿವಿಧ ವಯೋಮಾನಗಳಲ್ಲಿ 18 ವಿಧದ ಸ್ಪರ್ಧೆಗಳು ನಡೆಯಲಿವೆ’ ಎಂದು ತಿಳಿಸಿದರು.
‘ಇದೇ 12ರಂದು ಬೆಳಿಗ್ಗೆ 10ಕ್ಕೆ ಒಲಿಂಪಿಕ್‌ನಲ್ಲಿ ಭಾರತೀಯ ಹಾಕಿ ತಂಡವನ್ನು ಪ್ರತಿನಿಧಿಸಿದ್ದ ಕ್ರೀಡಾಪಟು, ಲಕ್ಷ್ಯಣ್ ಕ್ರೀಡಾ ಅಕಾಡೆಮಿ ಜಂಟಿ ನಿರ್ದೇಶಕ ಧನರಾಜ್ ಪಿಳ್ಳೆ ಅವರು ಕ್ರೀಡಾಕೂಟವನ್ನು ಉದ್ಘಾಟಿಸುವರು. ಲಕ್ಷ್ಯಣ್ ಕ್ರೀಡಾ ಅಕಾಡೆಮಿ ಸಹಸಂಸ್ಥಾಪಕ ಜೀವನ್ ಮಹದೇವು, ಎಲ್.ಯಾಶ್ಚಿಕಾ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮತ್ತಿತರರು ಭಾಗವಹಿಸುವರು. ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಕಿಶೋರ್‌ಕುಮಾರ್ ಪುತ್ತೂರು, ಐವನ್ ಡಿಸೋಜ ಭಾಗವಹಿಸುವರು’ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳಾ ಈಜು ಸಂಸ್ಥೆ ಕಾರ್ಯದರ್ಶಿ ಎಂ. ಶಿವಾನಂದ ಗಟ್ಟಿ, ಖಜಾಂಚಿ ಧನಂಜಯ್ ಶೆಟ್ಟಿ, ಮುಖ್ಯ ಈಜು ತ
ರಬೇತುದಾರ ಶಿಶಿರ್ ಎಸ್. ಗಟ್ಟಿ, ತರಬೇತುದಾರ ರಾಜೇಶ್ ಖಾರ್ವಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.