ADVERTISEMENT

Madhur Temple | ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಳ್ಳುತ್ತಿರುವ ಮಧೂರು ದೇವಾಲಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 13:32 IST
Last Updated 18 ಮಾರ್ಚ್ 2025, 13:32 IST
ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ
ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ   

ಕಾಸರಗೋಡು: ಮಧೂರಿನ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಳ್ಳುತ್ತಿದೆ.  ಇದೇ 27ರಿಂದ ಏ.7ವರೆಗೆ ವಿವಿಧ ಕಾರ್ಯಕ್ರಮ ನಡೆಯಲಿವೆ.

ಈ ಅವಧಿಯಲ್ಲಿ ಅಪರೂಪದ ‘ಮೂಡಪ್ಪ ಸೇವೆ’ ನಡೆಯಲಿದೆ. ಶಿವಪ್ರಸಾದ್ ತಂತ್ರಿ ದೇರೆಬೈಲು ಬ್ರಹ್ಮಕಲಶೋತ್ಸವ ಮತ್ತು ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ ಮೂಡಪ್ಪ ಸೇವೆಯ ನೇತೃತ್ವ ವಹಿಸಲಿದ್ದಾರೆ.

ನೂತನ ಮಹಾದ್ವಾರ, ರಾಜಗೋಪುರ ಮತ್ತು ರಾಜಾಂಗಣ ಲೋಕಾರ್ಪಣೆ ಹಾಗೂ ದೇವಾಲಯದ ಆವರಣದಲ್ಲಿ ದಿನಕ್ಕೆ ಎರಡು ಧಾರ್ಮಿಕ ಸಭೆಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮ, ಶಾಸ್ತ್ರೀಯ ಸಂಗೀತ, ಯಕ್ಷಗಾನ, ತಾಳಮದ್ದಲೆ, ಹರಿಕಥೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಬೆಳಿಗ್ಗೆಯಿಂದ ರಾತ್ರಿವರೆಗೆ ವಿವಿಧ ವೇದಿಕೆಗಳಲ್ಲಿ ನಡೆಯಲಿವೆ. ಉತ್ಸವದ ಎಲ್ಲ ದಿನ ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದ ವ್ಯವಸ್ಥೆ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ADVERTISEMENT

ದೇವಾಲಯಕ್ಕೆ ಮಾಯಿಪ್ಪಾಡಿ ಅರಸ ದಾನ ಮಾರ್ತಾಂಡವರ್ಮ ರಾಜ ಅವರು ಅನುವಂಶಿಕ ಮೊಕ್ತೇಸರರಾಗಿದ್ದಾರೆ. ಬಾರಿಕ್ಕಾಡು ರತನ್ ಕುಮಾರ್ ಕಾಮಡ ಪವಿತ್ರಪಾಣಿಯಾಗಿದ್ದಾರೆ. ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ, ಮಹಾಬಲೇಶ್ವರ ಭಟ್ ಎಡಕ್ಕಾನ, ಬಿ.ಎಸ್.ರಾವ್, ಮಂಜುನಾಥ ಕಾಮತ್, ಜಯದೇವ ಖಂಡಿಗೆ ನೇತೃತ್ವದಲ್ಲಿ ಉತ್ಸವ ಸಮಿತಿ ರಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.