ADVERTISEMENT

ವೈಜ್ಞಾನಿಕ ಬೆಳವಣಿಗೆ ಸಾಮಾಜಿಕ ಏಕತೆಗೂ ನಾಂದಿಯಾಗಬೇಕು: ಪಿಣರಾಯಿ ವಿಜಯನ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 13:10 IST
Last Updated 9 ಫೆಬ್ರುವರಿ 2024, 13:10 IST
ವಿಜ್ಞಾನ ಕಾಂಗ್ರೆಸ್ ಅಂಗವಾಗಿ ಶುಕ್ರವಾರ ನಡೆದ ವಿಜ್ಞಾನ ಅಧಿವೇಶನವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು
ವಿಜ್ಞಾನ ಕಾಂಗ್ರೆಸ್ ಅಂಗವಾಗಿ ಶುಕ್ರವಾರ ನಡೆದ ವಿಜ್ಞಾನ ಅಧಿವೇಶನವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು   

ಕಾಸರಗೋಡು: ವೈಜ್ಞಾನಿಕ ಬೆಳವಣಿಗೆ ಸಾಮಾಜಿಕ ಏಕತೆಗೂ ನಾಂದಿಯಾಗಬೇಕು. ನೂತನ ಸಾಧನೆಗಳು ಹೊಣೆಗಾರಿಕೆಯೊಂದಿಗೆ ಅನುಷ್ಠಾನಗೊಳ್ಳಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟರು.

ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆಯುತ್ತಿರುವ ವಿಜ್ಞಾನ ಕಾಂಗ್ರೆಸ್ ಅಂಗವಾಗಿ ಶುಕ್ರವಾರ ನಡೆದ ವಿಜ್ಞಾನ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನದಲ್ಲಿ ಅವಕಾಶ ನೀಡಿರುವ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಹಕ್ಕನ್ನು ದೇಶದಲ್ಲಿ ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದರು. ಧಾರ್ಮಿಕವಾಗಿ ರಾಷ್ಟ್ರವನ್ನು ನಿಯಂತ್ರಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ದೂರಿದರು.

ಕೆ.ಪಿ.ಸುದೀಪ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ , ಶಾಸಕ ಎನ್.ಎ.ನೆಲ್ಲಿಕುನ್ನು, ಪ್ರಾಂಶುಪಾಲ ಡಾ.ಪಿ.ಮನೋಜ್  ಇದ್ದರು.

ADVERTISEMENT

ನೋಬೆಲ್ ಪ್ರಶಸ್ತಿ ವಿಜೇತ ಮಾರ್ಟನ್ ಪಿ.ಮೆಲ್ಡನ್ ಅವರು ಶುಕ್ರವಾರ ವಿಜ್ಞಾನ ಕಾಂಗ್ರೆಸ್‌ನಲ್ಲಿ ಭಾಗಿಯಾದರು. 2022ರಲ್ಲಿ ಅವರಿಗೆ ನೋಬೆಲ್ ಪ್ರಶಸ್ತಿ ಒಲಿದಿತ್ತು. ಅವರ ಜೊತೆ ಪತ್ನಿ ಡಾ.ಫೀಟ್ಟಿಯಾ ಇದ್ದರು.

ವಿಜ್ಞಾನ ಕಾಂಗ್ರೆಸ್‌ನಲ್ಲಿ ಭಾಗಿಯಾದ ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಮಾರ್ಟನ್ ಪಿ.ಮೆಲ್ಡನ್ ಮತ್ತು ಪತ್ನಿ ಡಾ.ಫೀಟ್ಟಿಯಾ ಅವರ ಜೊತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಮಾತುಕತೆ ನಡೆಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.