ADVERTISEMENT

‘ಕೆಜಿಎಫ್ ಹಂಗಾಮಿ ಅಧ್ಯಕ್ಷರಾಗಿ ಉದಯ್‌ಕುಮಾರ್’

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 6:15 IST
Last Updated 11 ಅಕ್ಟೋಬರ್ 2020, 6:15 IST
ಮುಳೀಧರ್
ಮುಳೀಧರ್   

ಚಿಕ್ಕಮಗಳೂರು: ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್‌) ಹಂಗಾಮಿ ಅಧ್ಯಕ್ಷರಾಗಿ ಎನ್.ಬಿ.ಉದಯ್‌ಕುಮಾರ್ ಅವರನ್ನು ಆಯ್ಕೆಮಾಡಲಾಗಿದೆ ಎಂದು ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಮುಳೀಧರ್ ಎಸ್.ಬಕ್ಕರವಳ್ಳಿ ಇಲ್ಲಿ ಶನಿವಾರ ತಿಳಿಸಿದರು.

‘ಕರ್ನಾಟಕ ಬೆಳೆಗರರ ಒಕ್ಕೂಟಕ್ಕೆ 22 ಕಾಫಿ ಬೆಳೆಗಾರರ ಸಂಘಗಳ ಬೆಂಬಲ ಇದೆ. ಒಕ್ಕೂಟದ ಹಂಗಾಮಿ ಅಧ್ಯಕ್ಷರಾಗಿ ಎನ್.ಬಿ.ಉದಯ್‌ಕುಮಾರ್ ಅವರನ್ನು ಈಚೆಗೆ ನಡೆದ ಸಭೆಯಲ್ಲಿ ಆಯ್ಕೆಮಾಡಲಾಗಿದೆ. ಆದರೆ, ಕೆಜಿಎಫ್‌ನಿಂದ ಹೊರ ಹೋದ ಕೆಲವರು, ಹಾಸನದಲ್ಲಿ ಕೆಜಿಎಫ್(ರಿ) ಹೆಸರಿನಲ್ಲಿ ಸಂಘ ಸ್ಥಾಪಿಸಿದ್ದಾರೆ. ಸಂಘದ ಹೆಸರಿನಲ್ಲಿ ಪತ್ರಿಕಾಗೋಷ್ಠಿ ಹಾಗೂ ಪ್ರತಿಭಟನೆ ನಡೆಸಿದ್ದಾರೆ. ಬೆಳೆಗಾರರು ಗೊಂದಲಕ್ಕೀಡಾಗಬಾರದು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎನ್.ಬಿ.ಉದಯ್‌ಕುಮಾರ್ ಮಾತನಾಡಿ, ‘ಬ್ಯಾಂಕುಗಳಲ್ಲಿ ಕೃಷಿ ಸಾಲ ನೀಡಲು ಸಿಬಿಲ್ ಅಂಕ ಪರಿಗಣಿಸ ಬಾರದು. ಕಾಫಿ ಬೆಳೆಗಾರರಿಗೆ ಹೊಸದಾಗಿ ಬೆಳೆ ಸಾಲ ನೀಡಬೆಕು. ಜಿಲ್ಲೆಯ ಕುಂದೂರು, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು, ಕೊಡಗಿನ ಗೋಣಿಕೊಪ್ಪದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಆನೆಗಳನ್ನು ಹಿಡಿದು, ಸ್ಥಳಾಂತರಿಸಲು ಸರ್ಕಾರ ಕ್ರಮವಹಿಸಬೇಕು. ಕಾಡಾನೆ ದಾಳಿಯಿಂದ ಹಾನಿಯಾದ ಬೆಳಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ಅರೇಬಿಕಾ ಕಾಫಿ ಗಿಡವೊಂದಕ್ಕೆ ₹7500, ರೋಬಸ್ಟ ಕಾಫಿ ಗಿಡವೊಂದಕ್ಕೆ ₹9000 ಪರಿಹಾರ ನೀಡಬೇಕು’ ಎಂದರು.

ADVERTISEMENT

ಕೆಜಿಎಫ್ ಉಪಾಧ್ಯಕ್ಷ ಡಿ.ಎಂ.ವಿಜಯ್, ಖಜಾಂಚಿ ಐ.ಎಂ.ಮಹೇಶ್‌ಗೌಡ, ನಿಕಟಪೂರ್ವ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್, ಸದಸ್ಯರಾದ ಎನ್.ಕೆ.ಪ್ರದೀಪ್, ಅತ್ತಿಕಟ್ಟೆ ಜಗನ್ನಾಥ್, ಸಿ.ಎಸ್.ಸುರೇಶ್, ಲವ, ರತ್ನಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.