
ಪ್ರಜಾವಾಣಿ ವಾರ್ತೆಕೊರಗಜ್ಜ ತುಳುನಾಡಿನ ಆರಾಧ್ಯ ದೈವ. ಬೇಡಿದ ವರವನ್ನು ಕರುಣಿಸುವ ಅಗೋಚರ ಶಕ್ತಿ ಎಂಬ ನಂಬಿಕೆ ಭಕ್ತರಲ್ಲಿ ಗಟ್ಟಿಯಾಗಿದೆ. ಈ ಕಾರಣದಿಂದ ಕೊರಗಜ್ಜನ ಸನ್ನಿಧಾನಗಳಿಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಂಗಳೂರು ಸಮೀಪದ ಕುತ್ತಾರು ಸುತ್ತಮುತ್ತ ಕೊರಗಜ್ಜನ ಏಳು ಆದಿ ಸ್ಥಳಗಳು ಇದ್ದು, ಇಲ್ಲಿ ಎಲ್ಲಿಯೂ ಗುಡಿ ಅಥವಾ ಮೂರ್ತಿಯ ಆರಾಧನೆ ಇಲ್ಲ. ಕಟ್ಟೆ ಆಕಾರದ ಆಕೃತಿಯಲ್ಲೇ ಕೊರಗಜ್ಜನ ಆರಾಧನೆ ನಡೆಯುತ್ತದೆ. ಇದೇ ಇಲ್ಲಿನ ವೈಶಿಷ್ಟ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.